top of page

ಕೋರಿಕೆ

ಹೇಳಿದಿರಿ ಎಲ್ಲ - ಹೆಣ್ಣಲ್ಲ ಅವಳು

ಅದ್ವಿತೀಯ ಚೇತನ - ಮಹಿಳಾ ಶಕ್ತಿ!!


ಅನಾದಿಕಾಲದಿಂದ ಇಲ್ಲಿಯವರೆಗೂ

ಸಾಬೀತಾಗಿದೆ ಅವಳ ಸಾಮರ್ಥ್ಯ - ಶಕ್ತಿ!!


ಉದಾರತೆಯಿಂದ ಹುರಿದುಂಬಿಸಿ

ಮುನ್ನಡೆಸಿ, ಅರಿತು ಆಕೆಯ ಆಸಕ್ತಿ!!


ಸಹನಶೀಲೆ - ಭಾವನಾ ಜೀವಿ,

ನವ ಪೀಳಿಗೆಯ ಸೃಷ್ಟಿಕರ್ತೆ,

ತೋರಿಸಿ - ನಿಮ್ಮೆಲ್ಲರ ಪ್ರೀತಿ -ಭಕ್ತಿ!!


ಮೋಸ -ವಂಚನೆ - ಅತ್ಯಾಚಾರ

ಅನ್ಯಾಯಗಳಿಗೆ ಇತಿಶ್ರೀ ಹಾಡಿ!

ಅಸೂಯೆ ಪಡದೆ - ಶುಭ ಕೋರಿ

ಸಹಕರಿಸಿ - ಗೌರವವ ನೀಡಿ!!


ಇಂದು ವಿಶ್ವದ ಉದ್ದಗಲಕೂ

ಮಹಿಳಾ ದಿನಾಚರಣೆಯ

ಸಡಗರ - ಸಂಭ್ರಮ!!!!!


ಇದು ಅಹಂಕಾರವಲ್ಲ....!!

ಪ್ರತಿಭೆ - ಪರಿಶ್ರಮದ ಗೆಲುವು!

ಇರಲಿ ಪ್ರತಿಕ್ಷಣ - ಅನುದಿನ!!!


ಪ್ರಶಸ್ತಿ -ಸನ್ಮಾನ -ಪಾರಿತೋಷಕಗಳು

ಗುರುತಿಸುವಿಕೆಯ ಸಂಕೇತ!

ಶ್ಲಾಘನೀಯ ಕಾರ್ಯವಿದು

ನಡೆಯುತಿರಲಿ ಸತತ !!!!!!


ಸಾವಿತ್ರಿ ಶಾಸ್ತ್ರಿ, ಶಿರಸಿ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page