top of page

ಕಾನೂನು ಕುಸುಮ 3


ಜನತಾ ನ್ಯಾಯಾಲಯ (ಲೋಕ ಅದಾಲತ್) ಗಳು:


ಪ್ರಸ್ತುತ ವಿದ್ಯಮಾನ ದಲ್ಲಿ ವ್ಯಕ್ತಿಯೊಬ್ಬ ಅರ್ಜಿದಾರ ನಾಗಿ ಅಥವಾ ಎದೃದಾರ ನಾಗೀ ,ಹಲವಾರು ಸಂದರ್ಭ ಗಳಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.ಆದರೆ ನ್ಯಾಯಾಲಯದ ಕಾರ್ಯ ಕಲಾಪಗಳು ವ್ಯವಸ್ಥಿತವಾಗಿ ನಡೆದು ಪ್ರಕರಣಗಳು ಇತ್ಯರ್ಥವಾಗಲು ಸಮಯದ ಅವಶ್ಯಕತೆ ಬೀಳುತ್ತದೆ.ಅಂತಹ ಸಮಯದಲ್ಲಿ ಕಕ್ಷಿದಾರರಿಗೆ ಈ ಜನತಾ ನ್ಯಾಯಾಲಯ ಒಂದು ವರದಾನವಾಗಿದೆ .


ಪ್ರಕರಣವೊಂದರ ಉಭಯ ಪಕ್ಷಗಳ ವರಲ್ಲಿ ರಾಜಿಸಂಧಾನ ಏರ್ಪಡಿಸುವ ಮೂಲಕ ಪ್ರಕರಣ ವನ್ನು ಇತ್ಯರ್ಥ ಗೊಳಿಸುವ ಉದ್ದೇಶ ದಿಂದ ಹೈಕೋರ್ಟ್ ಕಾನೂನು ಸೇವಾ ಸಮಿತಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಅಥವಾ ತಾಲೂಕು ಕಾನೂನು ಸೇವಾ ಸಮಿತಿ ರಚಿಸುವ ನ್ಯಾಯಾಲಯವೇ ಜನತಾ ನ್ಯಾಯಾಲಯ (ಲೋಕ ಅದಾಲತ್) .


ಪ್ರತಿ ಜನತಾ ನ್ಯಾಯಾಲಯ ದಾಲ್ಲಿ ಕನಿಷ್ಠ ಇಬ್ಬರು ಸಂಧಾಂಕರರಿದ್ದು ಅವರಲ್ಲಿ ಒಬ್ಬರು ಸೇವೆಯಲ್ಲಿರುವ ಅಥವಾ ನಿವೃತ್ತ ರಾದ ನ್ಯಾಯಾಧೀಶರು,ಹಾಗೂ ವಕೀಲರು ಅಥವಾ ಸಮಾಜ ಸೇವಾಸಕ್ತರು,ಅಥವಾ ಯಾವುದೇ ಕ್ಷೇತ್ರದಲ್ಲಿ ತಜ್ಞ ರಾದವರು ಇರುತ್ತಾರೆ.ಇವರು ಪ್ರಕರಣ ವೊಂದರಲ್ಲಿ ಎರಡು ಪಕ್ಷಗಳಗರಲ್ಲಿ ರಾಜಿ ಸಂಧಾನ ಏರ್ಪಡಿಸಿ ಪ್ರಕರಣ ವನ್ನೂ ಇತ್ಯರ್ಥ ಗೊಳಿಸುತ್ತಾರೆ .


ಇಲ್ಲಿ ಮುಖ್ಯವಾಗಿ ಯಾವ ಯಾವ ಪ್ರಕರಣ ಎನ್ನುವುದನ್ನು ನೋಡುವುದಾದರೆ


1. ಮೋಟಾರು ವಾಹನ ಅಪಘಾತ ಗಳಲ್ಲಿ ಗಾಯಗೊಂಡವರು ಅಥವಾ ಮೃತಪಟ್ಟವರ ವಾರಸುದಾರರು ಅಥವಾ ಅವಲಂಬಿತರು ಪರಿಹಾರಧನ ಕೋರಿ ಸಲ್ಲಿಸಲಾದ ಪ್ರಕರಣಗಳು,


2. ಭೂ ಸ್ವಾಧೀನ ಸಂಬಂಧ ಸರ್ಕಾರದಿಂದ ಪರಿಹಾರಧನ ಕೋರಿ ಸಲ್ಲಿಸಲಾದ ಪ್ರಕರಣಗಳು,


3. ಪುರಸಭೆ ಪಂಚಾಯತಿ,ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ದ ದಾಖಲಾದ ಪ್ರಕರಣಗಳು,


4. ಬ್ಯಾಂಕ್ಗಳಿಗೆ ಸಂಬಂಧಿಸಿದ ಪ್ರಕರಣಗಳು .


5. ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು.


6. ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮಿನಲ್ ಮೊಕದ್ದಮೆಗಳು.


7. ಕಾರ್ಮಿಕ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳು.


8 . ಕಾರ್ಮಿಕ ನಸ್ತಪರಿಹಾರ ಆಯುಕ್ತರ ಮುಂದಿರುವ ಪ್ರಕರಣಗಳು .


9. ಗ್ರಾಹಕರ ವಿವಾದಗಳ ಸಂಬಂಧದ ಪ್ರಕರಣಗಳು .


ಒಟ್ಟಾರೆ ರಾಜ್ಯದ ಹೈಕೋರ್ಟ್ ನಲ್ಲಿ ಮತ್ತು ಬೇರೆ ಬೇರೆ ಯಾವುದೇ ನ್ಯಾಯಾಲಯ ಅಥವಾ ಕಚೇರಿಯಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಮತ್ತು ಕಾನೂನಿನ ಅನ್ವಯ ರಾಜಿ ಆಗಬಹುದಾದ ಎಲ್ಲಾ ವಿಧದ ಪ್ರಕರಣ ಗಳನ್ನೂ ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು.

ಅಲ್ಲದೆ ನ್ಯಾಯಾಲಯದಲ್ಲಿ ಇನ್ನೂ ದಾಖಲಾಗದ ಪ್ರಕರಣ ಅಥವಾ ವಿವಾದಗಳನ್ನು ಸಹ ಇತ್ಯರ್ಥ ಪಡಿಸಿ ಕೊಳ್ಳಬಹುದು.


ಜನತಾ ನ್ಯಾಯಾಲಯದ ವೈಶಿಷ್ಟ್ಯ:


1. ಇಲ್ಲಿ ವ್ಯಾಜ್ಯ ವನ್ನು ಕಡಿಮೆ ಖರ್ಚಿನಲ್ಲಿ ಹಾಗೂ ಶೀಗ್ರವಾಗಿ ಪರಿಹರಿಸಿಕೊಳ್ಳಬಹುದು


ಮತ್ತು ಇಲ್ಲಿ ನ್ಯಾಯಾಲಯ

ಶುಲ್ಕ ಕೊಡಬೇಕಾಗಿಲ್ಲ.


2. ಇಲ್ಲಿ ವಕೀಲರ ಮುಖಾಂತರವೇ ಭಾಗವಹಿಸ ಬೇಕೆನ್ನುವ ಕಡ್ಡಾಯ ನಿಯಮವಿಲ್ಲ ಕಕ್ಷಿದಾರರು ನೇರವಾಗಿ ಭಾಗವಹಿಸಬಹುದು.


3. ಇಲ್ಲಿ ಸಂದಾನಕಾರರು ಸೂಚಿಸುವ ಪರಿಹಾರ ತೃಪ್ತಿ ಯಾದರೇ ಮಾತ್ರ.


4. ಇಲ್ಲಿ ನೀಡಿದ ತೀರ್ಪು ಅಂತಿಮ ವಾಗಿದ್ದು ಅದರ ವಿರುದ್ದ ಮೇಲ್ಮನವಿ ಗೆ ಅವಕಾಶ ವಿಲ್ಲ.ಅದು ಎರಡು ಪಕ್ಷಗಳವರಿಗೆ ಬಂದನಕಾರಿ ಯಾಗಿರುತ್ತದೆ.ಮತ್ತು ಸಿವಿಲ್ ನ್ಯಾಯಾಲಯ ನೀಡಿದ ತೀರ್ಪಿ ನಷ್ಟೆ ಮಾನ್ಯವಾಗಿರುತ್ತದೆ.


ಒಟ್ಟಿನಲ್ಲಿ ಹೇಳಬೇಕೆಂದರೆ ಇದರ ಉಪಯೋಗ ತುಂಬಾ ವಿಸ್ತಾರವಾಗಿದೆ.


-ಉಮಾ ಡಿ ನಾಯ್ಕ

11 views0 comments

Comments


bottom of page