ಕೆತ್ತಲು ಹೋದೆ

ಕೆತ್ತಲು ಹೋದೆ

ಕೆತ್ತುತ್ತ ಕೆತ್ತುತ್ತ ಕೆತ್ತುತ್ತಲೇ ಕುಳಿತೆ

ಮೊದಲು ತಲೆ

ಆಮೇಲೆ ಕಣ್ಣು ಮೂಗು ಕಿವಿ ಬಾಯಿ

ಕುತ್ತಿಗೆ

ಭುಜ ಹೊಟ್ಟೆ ಹೊಕ್ಕುಳ

ತೊಡೆ ಕಾಲು

ಕೊನೆಗೆ ಪಾದ

ತಲೆಯೆತ್ತಿ ನಿಲ್ಲಬೇಕು

ಅದಕ್ಕೆ ಬೆಂಬಲಕ್ಕಾಗಿ ಬೆನ್ನು

ಹೀಗೆ ಮಾಡುತ್ತ ಮಾಡುತ್ತ ಇರುವಾಗ


ವಿಗ್ರಹ ಕೇಳಿತು:

ನೀನೇನು ಮಾಡುತ್ತಿರುವೆ?

ನಾನು ಒಂದು ಕ್ಷಣ ಸ್ತಬ್ಧ

ಅಪ್ಪನನ್ನೇ ಮಗು ಕೇಳಿದಂತೆ ಪ್ರಶ್ನೆ


ವಿಗ್ರಹ ಹೇಳಿತು:

ನೀನು ಮಾಡುತ್ತಿಲ್ಲ ನನ್ನ

ನಾನು ಮೊದಲು ಇದ್ದೆ

ಈಗಲೂ ಇದ್ದೇನೆ

ನಾಳೆಯೂ ಇರುತ್ತೇನೆ

ನೀನು ಮಾಡುತ್ತಿರುವೆ ನಿನ್ನನ್ನೆ

ಎಚ್ಚರ,

ಒಂದೊಂದು ಪೆಟ್ಟನ್ನು ಜಾಗ್ರತೆಯಿಂದ ಹಾಕು.


-ಡಾ. ವಸಂತಕುಮಾರ ಪೆರ್ಲ.

13 views0 comments