ಕಾಡುವ ಸಂಜೆ ಮತ್ತು ನೀನು

ಅದೆಷ್ಟು ಬಾರಿ ಮಂಕಾಗಿ

ವಿರಹದ ಜಡಿ ಮಳೆಗೆ ವಿನಾ ಕಾರಣ

ಬೈಗುಳ ಹೊದ್ದು ಕೊಂಡು ಮಲಗಿದ್ದೀನಿ

ನನ್ನ ನಿನ್ನ ಪ್ರೇಮಕ್ಕೆ ಬಾಯೆದೆರೆಯಲಾರದೆ

ಮುಷ್ಟಿ ಕಟ್ಟಿ ನೋವನ್ನೆಲ್ಲ ಹರಿವ ನದಿಗೆ

ಎಸೆಯುವ ಪ್ರಯತ್ನ ಮಾಡಿದ್ದೀನಿ


ಹೂವಂತೆ ನನ್ನ ಮೆದು ಮಾಡಿದಕ್ಕೆ

ನಾಚಿಕೆಯು ನನ್ನ ತುಂಬಿತು

ಬಂಡೆಕಲ್ಲಂತೆ ನಿಂತವಳ ಎದೆಗಾರಿಕೆ

ಯಾವ ಮಾಯೆಗೆ

ಪುಡಿಯಾಗಿ ಉರುಳಿತು.

ಗಾಳಿಯಷ್ಟು ಹಗುರವಾಗಿ ತೇಲಿತು

ಊಹಿಸಲಾರೆ


ಅಲೆಯಂತ ರಭಸಕ್ಕೆ ಮೈಯೊಡ್ಡಿ

ಕೊರಗದೆ ಹಸಿರಾದವಳ,

ಚಿಪ್ಪಿನೊಳಗೆ ಅವಿತವಳ

ಮರಳಿನ ಮೇಲೆ

ನಡೆದ ಪಾದಗಳಿಗೆ, ಹೆಸರುಗಳಿಗೆ

ಸಾಕ್ಷಿಯಾಗುತ್ತಾ ನಿಂತವಳ

ಅದು ಯಾವ ಸ್ಪರ್ಶ ಸೋಕಿಸುತ್ತಾ

ಕರಗಿಸಿದೆ ನಮ್ಮಿಬ್ಬರ ಈ ಅಂತರವರಾತ್ರಿ ಚಂದ್ರನ ಚೂರು ತೋರಿ

ಸಾಂತ್ವನ ಹೇಳಿದೆ

ಬೀದಿಯ ಮೌನಕ್ಕೆ ನಿನ್ನ ರಾಗ ಪೋಣಿಸಿ

ಮಡಿಲು ನೀಡಿದೆ

ನಕ್ಷತ್ರ ದೀಪ ಎದೆಯ ಒಲವಿಗೆ ಅಲಂಕರಿಸುತ್ತಾ

ಕತ್ತಲೆ ಮುಳುಗಿಸುವ ಜಾದು ಮಾಡಿದೆ

ಈ ಪರಿಗೆ ರಜಾ ನೀಡದೆ

ಪ್ರತಿ ಸಂಜೆಗೂ ಧಾವಿಸು

ನನ್ನ ಬಳಿ ಗಳೆಯಾ‌‌‌‌...‌‌...


ಎಂ.ಜಿ.ತಿಲೋತ್ತಮೆ

ಭಟ್ಕಳ

9 views0 comments