ಕವಿತೆಯ ದಿನ

ಹುಟ್ಟಿದ್ದಕ್ಕೊಂದು-

ಸತ್ತಿದ್ದಕ್ಕೊಂದು-

ಪ್ರೀತಿಗೊಂದು-

ನೀತಿಗೊಂದು-

ಅಂತೇ....

ಕವಿತೆಗೂ...

ಒಂದು 'ದಿನ'.

ಬರೆಯುವ ವ್ಯಸನ-

ಕ್ಕೆ ಬಿದ್ದು ಕತ್ತಲಲಿ

ಹೊಳೆಯದೇ,

ಶುಷ್ಕಪದಗಳ-

ಮೂಟೆ ಹೊತ್ತು,

ಬಯಲ ಬೆಳಕಿಗೆ

ಬಂದರೆ.......

ಅಲ್ಲೂ ಮಬ್ಬು,

ಸಾವಿನ ನೆರಳು,

ನರಳು..ಗಧ್ಗದಿತ

ಕೊರಳು ಎಲ್ಲೆಲ್ಲೂ.

ರಾಶಿ,ರಾಶಿ-

ಕವಿತೆಯ ಹೆಣ,

ಕಣ್ಣೆದುರು,ಈ...

ದಿನ ನಿಜಕ್ಕೂ..

ಕವಿತೆಯ 'ದಿನ'

ಎಲ್ಲೆಲ್ಲೂ

ಬರೀ 'ಕೊರೋನ'.

--ಅಬ್ಳಿ,ಹೆಗಡೆ

14 views0 comments