1.
ಹೃದ್ಯ -ಗದ್ಯ -ಪದ್ಯ!
ರಚನೆ -ನವ್ಯ - ಭವ್ಯ!
ಅರ್ಥಪೂರ್ಣ ಶ್ರಾವ್ಯ!
ಅನುರಣಿಸುವ ಕಾವ್ಯ!!
2.
ಕನಸು - ಕಲ್ಪನೆ - ಅನುಭವ
ವಾಸ್ತವಗಳ ಮಿಶ್ರಣ!
ಸೊಗಸಿನ ಪದ ಜೋಡಣೆ
ಬರವಣಿಗೆಯ ಹೂರಣ!
ಸಮರಕೂ - ಶಾಂತಿಗೂ
ಆಗಬಹುದು ಕಾರಣ!!
3.
ಕವಿತ್ವದ ಭಾವಲಹರಿ!
ಓದುಗನು ಅರ್ಥೈಸುವ ಪರಿ!!
ಆಗಬಹುದು ಭಿನ್ನ - ವಿಭಿನ್ನ!
ಮುದಗೊಳಿಸುವುದು ಮನವನ್ನ!!
ಸಾವಿತ್ರಿ ಶಾಸ್ತ್ರಿ, ಶಿರಸಿ
Comments