ಬಾಯಿಗೆ ಬೀಗ ಹಾಕು ಮೂರ್ಖನೆದುರು..!
ಹೀರಾ ತಹಾಂ ನ ಖೋಲಿಯೆ, ಜಹಾಂ ಕುಂಜಡೊಂಕಿ ಹಾಟ/
ಬಾಂಧೊ ಚುಪ್ ಕಿ ಪೋಟರಿ, ಲಾಗಹೂಂ ಅಪನಿ ಬಾಟ //
"ಸದಾ ಒಳ್ಳೆಯ ಮಾತನಾಡಿ" ಎಂಬುದು ಜ್ಞಾನಿಗಳ ನುಡಿ. ಆದರೆ ಇಂಥ ಮಾತುಗಳನ್ನಾಡುವಾಗ ಎದುರಿಗೆ ಇರುವ ವ್ಯಕ್ತಿಯ ಯೋಗ್ಯತೆ, ಸಮಯ, ಸಂದರ್ಭಗಳನ್ನು ಅಗಶ್ಯ ನೋಡಬೇಕು. ಆಸಕ್ತಿ ಇಲ್ಲದವನಿಗೆ ಬುದ್ಧಿಮಾತು ಹೇಳಿದರೆ, ಅದು ಕಿವುಡನ ಮುಂದೆ ಕಿನ್ನರಿ ಬಾರಿಸಿದಂತಾದೀತು. ಕತ್ತೆ ಬಲ್ಲದೆ ಕಸ್ತೂರಿ ಪರಮಳ? ಎಂಬಂತೆ, ಸಂಗೀತ ಜ್ಞಾನ ಇಲ್ಲದವನ ಮುಂದೆ ರಾಗಾಲಾಪನೆ ಮಾಡುವದು ಕೇವಲಕಂಠ ಶೋಷಣೆಯಾದೀತು. ಇತರರಿಗೆ ಒಳ್ಳೆಯದನ್ನು ಬಯಸುವದು ಒಳ್ಳೆಯ ವಿಚಾರವಾದರೂ ಬುದ್ಧಿ ಮಾತು ಹೇಳುವ ಪ್ರಸಂಗ ಎದುರಾದಾಗ, ಎದುರು ನಿಂತ ವ್ಯಕ್ತಿಯ ಆಸಕ್ತಿ, ಮನೋಭಾವಗಳನ್ನು ಅರ್ಥ ಮಾಡಿಕೊಳ್ಳಬೇಕು. ಯಾರಿಗೆ ನಮ್ಮ ಮೃದು ವಚನದ ಅಗತ್ಯ ಇಲ್ಲವೊ ಅಥವಾ ಅವರಿಗೆ ನಮ್ಮ ಒಳ್ಳೆಯ ವಚನದ ಮೌಲ್ಯ ತಿಳಿಯುವದಿಲ್ಲವೊ ಅಂಥವರ ಎದುರು ಬಾಯಿ ಮುಚ್ಚಿಕೊಂಡಿರುವದು ಲೇಸು.!
ಈ ಹಿನ್ನೆಲೆಯಲ್ಲಿ ಸಂತ ಕಬೀರರು,
"ಜಿಪುಣರೆದುರು, ರತ್ನ ಭಾಂಡಾರ ತೆರೆಯದಿರಿ /
ಗಂಟುಮೂಟೆ ಕಟ್ಟಿ, ನಿಮ್ಮ ದಾರಿ ಹಿಡಿಯಿರಿ //
ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ದರದ್ರರು ಅಥವಾ ಜಿಪುಣ ವ್ಯಕ್ತಿಗಳ ಎದುರು ನಮ್ಮಲ್ಲಿ ನ ರತ್ನ ಭಾಂಡಾರ ತೆರೆದರೆ, ಅವರು ಖರೀದಿಸುವದು ದೂರದ ಮಾತು. ಹಾಗಾಗಿನಿಮ ಶಕ್ತಿ ಸಾಮರ್ಥ ವ್ಯಯಿಸದೇ ಅಲ್ಲಿಂದ ಜಾಗೆ ಖಾಲಿಮಾಡಿ ಎಂದು ಕಬೀರರು ಸಲಹೆ ನೀಡಿದ್ದಾರೆ.
ನಕಾರಾತ್ಮಕ ಧೋರಣೆ ಮತ್ತು ಪೂರ್ವಾಗ್ರಹ ಪೀಡಿತ ಮಬಸ್ಸಿನವರಿಗೆ ಹಿತನುಡಿಗಳು ಹಿಡಿಸಲಾರವು. ಎಲ್ಲದರಲ್ಲೂ ನೈರಾಶ್ಯ ಕಾಣುವ, ತಪ್ಪು ಹುಡುಕುವ ವ್ಯಕ್ತಿಗಳ ಎದುರು ಸುಮ್ಮನೆ ಇರುವದು ಒಳ್ಳೆಯದು. ನಕಾರಾತ್ಮಕ ದೃಷ್ಟಿಕೋನ ದಿಂದ ಬಳಲುತ್ತಿರುವ ವ್ಯಕ್ತಿಗಳ ಎದುರು ಪ್ರಮಾಣಿಕ ನುಡಿಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹಾಗಾಗಿ ಇಂಥವರಿಗೆ ಉಪದೇಶಿಸುವ ಸಾಹಸ ಮಾಡದೇ ಮೌನವಾಗಿರುವದರಲ್ಲಿ ಜಾಣತನ ಅಡಗಿದೆ.
ಮುತ್ತು, ರತ್ನದ ಮೌಲ್ಯ ಜಿಪುಣನಿಗೇನು ಗೊತ್ತು?
ಕತ್ತೆಯೇನು ಬಲ್ಲದು ಸಿಹಿ ಹೂರಣದ ಸವಿಯ / ಹಿತನುಡಿಗಳ ಆಡದಿರು ಕಡು ಮೂರ್ಖನೆದುರು
ಸತ್ಯದ ಅರಿವಿರಲಿ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ
Comments