top of page

ಕಬೀರ ಕಂಡಂತೆ... ೩೧

ಕಲಿಯುಗದಲಿ ಹಿತವಚನಕೆ ಬೆಲೆಯೆಲ್ಲಿ..!?


ಕಲಿ ಖೋಟಾ ಜಗ ಅಂಧಾರಾ, ಶಬ್ದ ನ ಮಾನೆ ಕೋಯ/

ಚಾಹೆ ಕಹೂಂ ಸತ್ ಆಯಿನಾ, ಸೋ ಜಗ ಬೈರಿ ಹೋಯ//

ಬದಲಾಗುತ್ತಿರುವ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ, ಇಂದು ಆಧುನಿಕತೆಯ ಬಿರುಗಾಳಿಗೆ ಒಡ್ಡಿಕೊಂಡ ಮನುಷ್ಯನಿಗೆ ನಮ್ಮ ಪರಂಪರೆಯ ಬಗ್ಗೆ ಯೋಚಿಸಲೂ ಸಮಯವಿಲ್ಲದಂತಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ತಾಂಡವ- ವಾಡುತ್ತಿದೆ. ಅಹಂಕಾರದ ಕೋಟೆ ಕಟ್ಟಿಕೊಂಡು ಮೆರೆಯುವ ಜನರ ಕಿವಿಗೆ ಬುದ್ಧಿ ಮಾತುಗಳು ಕೇಳದಂತಾಗಿವೆ. ನಕಾರಾತ್ಮಕ ವಿಚಾರ, ಸ್ವಕೇಂದ್ರಿತ

ಗುಣ, ಒಳ್ಳೆಯದನ್ನು ನಿರ್ಲಕ್ಷಿಸುವ ಮನೋಭಾವ ಮತ್ತು ಅವಹೇಳನ ಪ್ರವೃತ್ತಿಯಿಂದಾಗಿ ಮನುಷ್ಯನ ಮನಸ್ಸು ಪ್ರಕ್ಷುಬ್ಧಗೊಂಡಿದೆ. ಇದು ದುಃಖ, ನಿರಾಸೆ -ಗಳಿಗೆ ಕಾರಣವಾಗುವದರಲ್ಲಿ ಸಂದೇಹವಿಲ್ಲ.


ಇಂಥ ಸಂದರ್ಭದಲ್ಲಿ ಸಂತ ಕಬೀರರು,

"ಕಲಿಯುಗದ ಕತ್ತಲಲಿ, ನಲ್ನುಡಿ ಕೇಳುವವರಿಲ್ಲ/

ಸತ್ಯವಂತ ಜನರೇ ಜಗಕೆ ವೈರಿಯಾಗಿಹರಲ್ಲ.!!"

ಎಂದು ಉದ್ಗರಿಸಿದ್ದಾರೆ. ಅಜ್ಞಾನದ ಅಂಧಃಕಾರ -ದಲ್ಲಿ ಮುಳುಗಿದ ಜನರಿಗೆ ಬುದ್ಧಿಮಾತು ಕೇಳವದೇ ಇಲ್ಲ. ಹಿತನುಡಿಗಳನ್ನಾಡುವ ಸಜ್ಜನರೇ ಇಲ್ಲಿ ವೈರಿ -ಯಾಗಿದ್ದಾರೆ! ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.


ಹಿರಿಯರ. ಅನುಭವಾಮೃತದ ನುಡಿ ಮತ್ತು ಚಿಣ್ಣರ ಕಲರವ ಕೇಳದ ಮನೆ ಮಸಣವಿದ್ದಂತೆ! ಕಿರಿಯರು ದಾರಿ ತಪ್ಪಿದಾಗ ಬುದ್ಧಿಮಾತು ಹೇಳಿ ಸನ್ಮಾರ್ಗದತ್ತ ಕೊಂಡೊಯ್ಯುವ ಹಿರಿಜೀವಗಳು ಅಗತ್ಯ. ಅಜ್ಞಾನ -ದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವದೇ ಬದುಕಿನ ನಿಜ ಮರ್ಮ. ಇದನ್ನರಿತು ಮುನ್ನಡೆಯುವದೇ ಮನುಷ್ಯ ಜೀವನದ ಉದ್ದೇಶ.


ಅಡ್ಡದಾರಿ ಹಿಡಿದರೆ ಬದುಕು ನೇರವಾಗದು

ನುಡಿ ನೇರವಿಲ್ಲದಿರೆ ಬಂಧ ಗಟ್ಟಿಯಾಗದು/

ಅರೆ ಸುಖಕೆ ಭವ್ಯ ಬದುಕ ಬಲಿಗೊಡಲೇಕೆ?

ನೇರ ದಾರಿಯನಪ್ಪು - ಶ್ರೀವೆಂಕಟ //


ಶ್ರೀರಂಗ ಕಟ್ಟಿ ಯಲ್ಲಾಪುರ.

11 views0 comments

Comments


bottom of page