ಮಾತು ಕನ್ನಡ,"ಮಾತೆ"ಕನ್ನಡ.
ಬದುಕ ರೀತಿಯೆ ಕನ್ನಡ.
ಅಡಿಯು ಕನ್ನಡ,ಮುಡಿಯು ಕನ್ನಡ,
ಗುಡಿಯ ದೇವರು ಕನ್ನಡ.
ಹೆಸರು ಕನ್ನಡ,ಉಸಿರು ಕನ್ನಡ,
ಬಸಿರು,ಬವಣೆಯು ಕನ್ನಡ.
ನಗುವು ಕನ್ನಡ,ಅಳುವು ಕನ್ನಡ,
ಮೊದಲ ತೊದಲೂ ಕನ್ನಡ.
ನೆಲವು ಕನ್ನಡ ಜಲವು ಕನ್ನಡ,
ನಡೆವ ನೆರಳೂ ಕನ್ನಡ.
ಅರಿವು ಕನ್ನಡ,ಇರವು ಕನ್ನಡ,
ಗುಟ್ಟು,ಮಟ್ಟೂ ಕನ್ನಡ.
ಇಂತು ಈದಿನ ಹಾಡಿ ಕುಣಿವರು
ಹಿಡಿದು ಕನ್ನಡ "ಕನ್ನಡಿ".
ಬರೆದೆ ಬರೆವರು,ಬರುವ ಬದುಕಿಗೆ
"ಆಂಗ್ಲಭಾಷೆಯ"ಮುನ್ನುಡಿ.
ವರ್ಷಕೊಂದಿನ ಮಾತ್ರಬರುವದು
ನಾಡು,ನುಡಿಯಾ ಶ್ರದ್ಧೆಯು.
ಉಳಿದ ದಿನದಲಿ "ಆಂಗ್ಲೊಕನ್ನಡ",
ಕನ್ನಡಮ್ಮನ ಶ್ರಾದ್ಧವು.
--ಅಬ್ಳಿ,ಹೆಗಡೆ.*