ಕನ್ನಡ ನಾಡಲಿ ಹುಟ್ಟಲು ಬಹಳ ಪುಣ್ಯವು ಬೇಕು ಗೆಳೆಯ
ಕನ್ನಡ ನಾಡದು ರೂಪಿತವಾಗಿ ಪಾವನಗೊಳಿಸಿತು ಇಳೆಯ
ನಮ್ಮೀ ನೆಲದ ಮಣ್ಣದು ಗಂಧ ತುಂಬಿದೆ ಚಂದನ ಶ್ರೀಗಂಧ
ಸುಂದರ ಭಾಷೆ ಬರೆಯಲು ಅಂದ ನುಡಿಯದು ಕೇಳಲು ಕರ್ಣಾನಂದ
ಸಾವಿರ ಸಾವಿರ ವರುಷಕೂ ಹಳೆಯದು
ನಮ್ಮೀ ತಾಯ್ನುಡಿಯು
ಕನ್ನಡವೆಂದರೆ ಹೆಮ್ಮೆಯು ಇರಲಿ ಆಗಲಿ ನಮ್ಮೆದೆಯೇ ಗುಡಿಯು
ನಾಡಿಗೆ ಪಾವನ ನದಿಗಳ ಸಂಗ ಶಿಲ್ಪಕಲೆಯು ಉತ್ತುಂಗ
ಜನಿಸಿದರೆನಿತೊ ವಿಶ್ವಖ್ಯಾತರು ಕನ್ನಡ ನಾಡಿನ ತುಂಬ
ಕನ್ನಡ ಭಾಷೆಯ ಬಳಸುತ ನಾವು ನುಡಿಯನು ಬೆಳೆಸೋಣ
ತೊಲಗಿಸಿ ಮನದ ಕೀಳರಿಮೆಯನು ಕನ್ನಡ ಉಳಿಸೋಣ"
©ವೆಂಕಟೇಶ ಬೈಲೂರು
ನಮ್ಮ ನಡುವಿನ ಭರವಸೆಯ ಕವಿ,ಬರಹಗಾರ ಶ್ರೀ ವೆಂಕಟೇಶ ಬೈಲೂರು ಅವರ "ಕನ್ನಡ ನಾಡಲಿ" ಎಂಬ ಕವಿತೆ ನಿಮ್ಮ ಓದು ಮತ್ತು ಪ್ರತಿಸ್ಪಂದನಕ್ಕಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
コメント