ಕನ್ನಡ ಕಂದ

ಕನ್ನಡ ನಾಡಿನ ಕಂದನು ನಾನು ಕನ್ನಡವನ್ನೆ ಬೆಳಗುವೇನು.. ಅ,ಆ,ಇ,ಈ ಎನ್ನುತ್ತಾ ನಾನು ಕನ್ನಡವನ್ನೆ ಕಲಿಯುವೇನು. ಸಹ್ಯಾದ್ರಿಯ ಗಿರಿಕಂದರಗಳ ಕಾವೇರಿ ಕೃಷ್ಣೆ ತುಂಗೆ ತೀರದಲಿ ಶ್ರೀಗಂಧ ವನ್ಯಸಿರಿ ನಾಡಿನಲಿ ಸೌಗಂಧ ತುಂಬಿದ ಮಣ್ಣಿನಲಿ ಎಂದಿಗೂ ನಾನು ಮೆರೆಯುವೇನು.. ಹರಿಹರ ಕೃಷ್ಣರು ಕಟ್ಟಿದ ಚಾಲೂಕ್ಯ ಕದಂಬರು ಆಳಿದ ಚೆನ್ನಮ್ಮಾ ಓಬವ್ವಾ ಹೋರಾಡಿದ ವೀರರು ಧೀರರು ಮೆರೆದಿಹ ಶೌರ್ಯದ ಇತಿಹಾಸ ಕೇಳುವೇನು.. ಶರಣರು ದಾಸರು ಬದುಕಿದ ಸೂಫಿ ಸಂತರು ಬೆಳಗಿದ ಸತ್ಯ ಶಾಂತಿ ನಿತ್ಯ ನೀತಿ ಐಕ್ಯ ಮಂತ್ರ ಸಾರಿದ ಪಾವನ ನೆಲಕ್ಕೆ ನಮಿಸುವೇನು. ರನ್ನ ಪಂಪರ ಅಪಾರ ಪಾಂಡಿತ್ಯ ಕುವೆಂಪು ಬೇಂದ್ರೆಯ ಅಗಾಧ ಜ್ಞಾನದಿ ಜೆ.ಪಿ ಬಿಚಿ ಗಿರೀಶ ಕಂಬಾರರ ಭವ್ಯದ ಅಕ್ಷರ ಪಾಠವನು ಕೇಳುತ ಓದುತ ನಲಿಯುವೇನು. ಎಲ್ಲೆ ಇರಲಿ ಹೇಗೆ ಇರಲಿ ಯಾರೆ ಇರಲಿ ಏನೇ ಬರಲಿ ಕನ್ನಡ ಬಾವುಟ ಹಾರಿಸುವೆ  ಕನ್ನಡ ಡಿಂಡಿಂ ಬಾರಿಸುತಾ ಕನ್ನಡ ತೇರನು ಎಳೆಯುವೇನು...

- ಮಲಿಕಜಾನ ಶೇಖ . ಅಕ್ಕಲಕೋಟ, ಮಹಾರಾಷ್ಟ್ರ


ReplyForward
65 views2 comments