top of page

ಕನ್ನಡಕ್ಕೆ ಮೊದಲ ಸಾಮಾಜಿಕ ಕಾದಂಬರಿ ಕೊಟ್ಟ-ಕೆರೂರು ವಾಸುದೇವಾಚಾರ್ಯರು

ಮರೆಯಲಾಗದ ಮಹಾನುಭಾವರು


ಇಪ್ಪತ್ತನೆಯ ಶತಮಾನದ ಆರಂಭದ ಕಾಲ. ಅಂದಿನ ಸಮಾಜದಲ್ಲಿ ಹಲವು ಬಗೆಯ ಅಂಧ ಶ್ರದ್ಧೆಗಳು, ಅನುಚಿತ ಸಂಪ್ರದಾಯಗಳ ಕುರುಡು ಅನುಸರಣೆಗಳು ತುಂಬಿಕೊಂಡಂತಹ ವಾತಾವರಣ. ಆಗ ತಮ್ಮ " ಇಂದಿರಾ" ಎಂಬ ಕಾದಂಬರಿಯ ಮೂಲಕ ಪ್ರೇಮವಿವಾಹ/ ವಿಧವಾ ವಿವಾಹದಂತಹ ವಿಷಯವನ್ನೆತ್ತಿಕೊಂಡು ಕ್ರಾಂತಿಕಾರಿ ನಿಲುವನ್ನು ತೋರಿಸಿದವರು ಕೆರೂರು ವಾಸುದೇವಾಚಾರ್ಯರು. ೧೯೦೮ ರಲ್ಲಿ ಅವರ ಈ ಕಾದಂಬರಿ ಹೊರಬಂದು ಆಗಿನ ಮಡಿವಂತರಲ್ಲಿ ಕೋಲಾಹಲವನ್ನೇ ಎಬ್ಬಿಸಿತು. ಕಾದಂಬರಿ ಬರೆಯುವವರಿಗೆ ಹೊಸ ಹಾದಿ ನಿರ್ಮಿಸಿಕೊಟ್ಟಿತು.

‌‌‌‌ ಬಾಗಲಕೋಟೆಯಲ್ಲಿ ಅವರು ಜನಿಸಿದ್ದೂ ಒಂದು ಸಂಪ್ರದಾಯಸ್ಥ ಕುಟುಂಬದಲ್ಲೇ. ೧೮೬೬ ರ ಅಕ್ಟೋಬರ್ ೧೫ ರಂದು ಜನ್ಮ ತಾಳಿದ ವಾಸುದೇವಾಚಾರ್ಯರ ಪೂರ್ವಜರು ಬಾದಾಮಿ ತಾಲೂಕಿನ ಕೆರೂರು ಗ್ರಾಮದವರಾಗಿದ್ದರಿಂದ ಇವರ ಹೆಸರಿನೊಡನೆ ಕೆರೂರು ಸೇರಿಕೊಂಡಿತು. ಪುಣೆಯಲ್ಲಿ ಕಾಲೇಜು ಶಿಕ್ಷಣ ಮುಗಿಸಿ ವಕೀಲಿ ವೃತ್ತಿಯನ್ನು ಆರಂಭಿಸಿದ ಅವರು ೧೯೦೦ ರ ನಂತರ ೨೦ ವರ್ಷಗಳ ಕಾಲ ನಿರಂತರ ಸಾಹಿತ್ಯ ರಚನೆಯ ಕಾರ್ಯ ಕೈಕೊಂಡರು. ಕತೆ , ಕಾದಂಬರಿ, ನಾಟಕಗಳನ್ನು ಬರೆದರು. ಈ ಮಧ್ಯೆ " ಸಚಿತ್ರ ಭಾರತಿ" ಮಾಸಪತ್ರಿಕೆ ಮತ್ತು " ಶುಭೋದಯ" ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು.

ಇಂದಿರಾ, ಯದುಮಹಾರಾಜ, ವಾಲ್ಮೀಕಿ ವಿಜಯ, ಯಮನ ಸೈರಂಧ್ರಿ, ಔರಂಗಜೇಬ ಇವು ಅವರ ಐದು ಕಾದಂಬರಿಗಳು. ಪ್ರೇಮವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳು ಇವು ಕಥಾಸಂಕಲನಗಳು. ನಳದಮಯಂತಿ, ಪತಿವಶೀಕರಣ ಮೊದಲಾದ ನಾಟಕಗಳನ್ನೂ ಬರೆದರು. ಇಂದಿರಾ ಬೂ ಮುದ್ರಣಗಳನ್ನು ಕಂಡಿದೆ. ಧಾರವಾಡದ ಮನೋಹರ ಗ್ರಂಥಮಾಲೆ ವಾಸುದೇವಾಚಾರ್ಯರ ಕೃತಿಗಳ ಮೂರು ಸಂಪುಟಗಳನ್ನು ಹೊರತಂದಿದೆ.

‌‌ ಕನ್ನಡದ ಸಾಮಾಜಿಕ ಕಾದಂಬರಿಗಳಿಗೆ ತಳಹದಿ ನಿರ್ಮಿಸಿಕೊಟ್ಟ ಕೆರೂರು ವಾಸುದೇವಾಚಾರ್ಯರು ೧೯೨೧ ಜನೆವರಿ ೧೧ ರಂದು ನಿಧನರಾದರು.

‌‌‌ ‌‌‌‌

- ಎಲ್. ಎಸ್. ಶಾಸ್ತ್ರಿ

152 views0 comments

Comments


©Alochane.com 

bottom of page