top of page

ಕಣಿ ಮತ್ತು ಉತ್ತರ


ಕಣಿ ಹೇಳಬಲ್ಲರು ಇವರು

ಉತ್ತರವನೂ.

ಅವರೇ ಕಟ್ಟಿದ್ದೇನಲ್ಲವಾದರೂ

ಕೇಳಿದ್ದು ಬಲ್ಲರಷ್ಟೇ-ಕಣಿ,

ಹೇಳಬಲ್ಲವರು.

ಒಂದಕೊಂದೇ ಉತ್ತರ ಹೇಳಿಕೊಟ್ಟರು:ಕಣಿ ಅಂದವರು,

ಅದರಾಚೆ ಕೇಳಿದವರು

ಮತ್ತೊಂದು ಉತ್ತರಕೆ

ಹುಡುಕಲೇ ಇಲ್ಲ!

ಹುಡುಕಲೇ ಇಲ್ಲ ಉತ್ತರವ,

ಬಾಳಿನ ಕಣಿಗೆ,

ಬದಲಾಗಬೇಕೆಂಬ ಬಯಕೆ ಹೊತ್ತೇ ಇಹರಿನ್ನು

ಶೋಧಿಸುತ್ತಲೇ ಇಹರಿನ್ನೂ

ಕಣಿಗೆಂಟು ಪರಿಹಾರ

ಹೊಳೆವುದೆಂದು!

ಯಾರ ಮೆದುಳಿನಲವಿತು

ಕುಳಿತಿಹುದೊ ಏನೋ?

ಉತ್ತರ,ಅದರದೇ ಕಾತರ!!



*ಗಣಪತಿ ಗೌಡ, ಹೊನ್ನಳ್ಳಿ ಅಂಕೋಲಾ

ಕವಿ ಗಣಪತಿ ಗೌಡ ಹೊನ್ನಳ್ಳಿ ಅವರ 'ಕಣಿ ಮತ್ತು ಉತ್ತರ' ಕವನ ನಿಮ್ಮ ಓದಿಗಾಗಿ. ಸಂಪಾದಕ

17 views0 comments
bottom of page