top of page

ಒಮ್ಮೊಮ್ಮೆ... [ಕವನ]


ಹಗಲ ಬೆಳಕ ಸುರಳೀತ ನಡೆಯಲ್ಲಿ

ಹೆಗಲೇರಿ ಕುಳಿತ ರಾತ್ರಿಯ ಕರಾಳ

ಕನಸಿನ ನೆನಪಲ್ಲೂ ಇದ್ದಕ್ಕಿದ್ದಂತೆ

ವರ್ಣನಾತೀತ ಹೊಳಪು ಒಮ್ಮೊಮ್ಮೆ...


ಇರಬಹುದೇನೋ,,ಗಿಡ,ಮರಗಳಿಗೂ

ಸಂಕಷ್ಟ,ನೋವು,ಬವಣೆ,ಹಸಿವು,ತೃಷೆ

ಆದರೂ ಮುಗಿಲೆತ್ತರ ಚಿಗುರಿ ಹೂ,

ಹಣ್ಣಲ್ಲಿ ಖುಷಿಯು ಕಣ್ತೆರೆವುದಲ್ಲ

ಒಮ್ಮೊಮ್ಮೆ....


ಹೊಯ್ದಾಡುವ ಪ್ರಕು಼ಬ್ಧ ಕಡಲಲ್ಲೂ

ಶಾಂತ,ಸುಂದರ,ಭವ್ಯ,ಗಂಭೀರತೆ

ಗೋಚರಿಸುವದಲ್ಲ ಒಮ್ಮೊಮ್ಮೆ....

ನೀರಿಲ್ಲದೇ ಭಣಗುಡುವ ಬೆಂಗಾಡೂ

ಹಸಿರ ಹೊದ್ದು ನಳನಳಿಸಿ ಕಣ್ತಣಿಸುವದಲ್ಲ

ಒಮ್ಮೊಮ್ಮೆ....


ಗಬ್ಬುನಾರುವ ಕೆಸರಲ್ಲೂ ಕಮಲ

ಅರಳಿ,ಪರಿಮಳ ಸೂಸಿ ಮನವ

ಮುದಗೊಳಿಸುವದಲ್ಲ..

. ಒಮ್ಮೊಮ್ಮೆ...


ಬರೀ ಸಾವು ನೋವು ದುಃಖ ತುಂಬಿದ

ನರಕ ಸದೃಶ ಬದುಕಲ್ಲೂ ಸ್ವರ್ಗ ಸುಖ

ಹಣಕಿಕ್ಕುವದಲ್ಲ ಒಮ್ಮೊಮ್ಮೆ....

ಅರ್ಥವಾಗದ ಸತ್ಯವಾದರೂ ಇದು

ನೆಮ್ಮದಿಗೆ ಕಾರಣ ಒಮ್ಮೊಮ್ಮೆ...!!!






--ಅಬ್ಳಿ,ಹೆಗಡೆ.

4 views0 comments

Comments


bottom of page