ಅಂದು ಮುಂಜಾನೆ
ಮನೆಯ ಸುತ್ತೆಲ್ಲ ಗಿಡಮರಗಳೂ
ಸಾಮೂಹಿಕ ಜೀವ ತ್ಯಜಿಸಿ
ದ ಹಾಗೆ ತಟಸ್ಥ!
ಚಿಲಿಪಿಲಿಯೇ ಸಾಮೂಹಿಕ ದಹಿಸಿ ಭಸ್ಮವಾದಂತೆ
ಬೆಳಗಿನ ಹಕ್ಕಿಗಳೆಲ್ಲ ಗಾಢ ಮೌನ!
ದಢಕ್ಕನೆ ಆಕಾಶ ಕವಿದ ಅಗಾಧ ಕಪ್ಪು!
ಏನಿರಬಹುದು...!
ದಿನ ಏರಿದಂತೆ ಬಂತು -- ಬಂದೇಬಿಟ್ಟಿತು
ಆ...ಸುದ್ದಿ!
ಎಸ್.ಪಿ.ಬಿ --
ಮಲಗೇ ಬಿಟ್ಟರು ಚಿರಶಾಂತಿಯಲಿ...!
ಅಯ್ಯೋ
ಭಗವಂತನೇ...
ಜಗದಾದ್ಯಂತ ಕರ್ಣ-
ರಸಾಯನವನಿಕ್ಕಿ
ನಿರಂತರ ಉಣಬಡಿಸಿದ ಭಾಗ್ಯವಂತ!
ಎಂಥ ಅಂತ್ಯ ವೋ...ದೇವ?
ಗಾನಕಿರೀಟ ಉರುಳಿತು
ಮಣ್ಣಲಿ ಮಣ್ಣಾಯಿತು...
ಜಗದಗಲ ಕಣ್ಣು
ಬಿಕ್ಕಿ ಬಿಕ್ಕಿ ಸುರಿಸಿದೆ ಕಣ್ಣೀರು
ಇನ್ನು ಎಸ್ ಪಿ ಬಿ ನಿಲ್ಲುವರು ನಿರಂತರ
ಕೇಳುಗಿವಿಗಳ ಎದೆಯ ಪಂಜರದಲಿ
...ದೇವಲೋಕದ ಕೋಗಿಲೆಯ ಹಾಗೆ...
ಡಾ. ಅರಕಲಗೂಡು ನೀಲಕಂಠ ಮೂರ್ತಿ.