ಎಲ್. ಎಸ್. ಶಾಸ್ತ್ರಿ ಅವರಿಗೆ ಪುತ್ತೂರಿನ ಲೋಕವಿಕಾಸ ಪ್ರತಿಷ್ಠಾನದ ಲಷ್ಕರಿ ಕೇಶವ ಭಟ್ಟ ಜನ್ಮಶತಾಬ್ದಿ ಪ್ರಶಸ್ತಿ
***********************
ಪಿಲಿಡೆಲ್ಪಿಯಾ- ಲಕ್ಷ್ಮೀನಾರಾಯಣ ಶಾಸ್ತ್ರಿ ಅವರು ಹೊಸಗನ್ನಡ ಸಾಹಿತ್ಯ ಪ್ರಪಂಚದ ಅಕ್ಷರ ತಪಸ್ವಿ. "ಕಾವ್ಯ ಶಾಸ್ತ್ರ ವಿನೋದೇನ ಕಾಲೊ ಗಚ್ಛತಿ ಧೀಮತಾಮ್" ಎಂಬ ಸೂಕ್ತಿಗೆ ಉದಾಹರಣೆಯಾದವರು.ಗಟ್ಟಿಯಾದ ಹಲ್ಲು ಬೇಗನೆ ಉದುರಿ ಹೋಗುತ್ತದೆ ಆದರೆ ಮೆತ್ತಗಿನ ನಾಲಿಗೆ ಬಹುಕಾಲ ಬಾಳು್ತದೆ ಎಂಬ ಮಾತಿಗೆ ಉದಾಹರಣೆಯಾದವರು.ಸಾಹಿತ್ಯ ಪ್ರಪಂಚದ ರಸನೆಯಂತಿದ್ದು ಅದರ ಸ್ವಾದವನ್ನು ಸಹೃದಯ ಪ್ರಪಂಚಕ್ಕೆ ಉಣ ಬಡಿಸಿದವರು ಎಲ್.ಎಸ್.ಶಾಸ್ತ್ರಿ.ಸಾಹಿತ್ಯ, ಪತ್ರಿಕೆ, ಕಲಾ ಕ್ಷೇತ್ರಗಳಲ್ಲಿ ಆರು ದಶಕಗಳ ಸೇವೆ ಸಲ್ಲಿಸಿರುವ ಬೆಳಗಾವಿಯ ಹಿರಿಯ ಸಾಹಿತಿ, ಪತ್ರಕರ್ತ, ಸಾಂಸ್ಕೃತಿಕ ನೇತಾರ ,ಬೆಳಗಾವಿ ಜಿಲ್ಲ್ಲಾ ಚುಟಕ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ,ಕವಿ,ವಾದಿ,ವಾಗ್ಮಿ,ಅಂಕಣಕಾರರಾದ
ಎಲ್. ಎಸ್. ಶಾಸ್ತ್ರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಲೋಕವಿಕಾಸ ಪ್ರತಿಷ್ಠಾನದ( ರಿ.) ವೇ. ಮೂ. ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ಅಗಸ್ಟ್ ೨೦ ರವಿವಾರ ಅಪರಾಹ್ನ ೩ ಗಂಟೆಗೆ ಪುತ್ತೂರಿನ ಕೃಷ್ಣ ಆರ್ಕೇಡ್ ಸಭಾಭವನದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಕೆ. ಜಯರಾಜ ಆಚಾರ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು , ಖ್ಯಾತ ತಾಳಮದ್ದಳೆ ಅರ್ಥಧಾರಿ , ಚಿಂತಕ ಶ್ರೀ ನಾರಾಯಣ ಯಾಜಿ ಸಾಲೇಬೈಲು, ಹೊನ್ನಾವರ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಮಾನಪತ್ರ, ಸ್ಮರಣಿಕೆ ಮೊದಲಾದವುಗಳಿಂದ ಕೂಡಿದೆ.ಎಲ್.ಎಸ್.ಶಾಸ್ತ್ರಿ ಅವರು ಮಾಡಿದ ಸಾಹಿತ್ಯ ಕೃಷಿಗೆ ರಾಜ್ಯೋತ್ಸವ ಪ್ರಶಸ್ತಿ ಆದಿಯಾಗಿ ಅಕಾಡೆಮಿಗಳ ಪ್ರಶಸ್ತಿಗಳು ಇಷ್ಟರಲ್ಲೆ ಬರ ಬೇಕಾಗಿತ್ತು. ಇನ್ನಾದರು ಅವರಿಗೆ ಹಲವು ಮಹತ್ವದ ಪ್ರಶಸ್ತಿ ಪುರಸ್ಕಾರಗಳು ಒದಗಿ ಬರಲಿ ಎಂದು ನಮ್ಮ ಆಲೋಚನೆ.ಕಾಂ ಪತ್ರಿಕೆಯ ಗೌರವಾನ್ವಿತ ಬರಹಗಾರರಾದ ಶ್ರೀ ಎಲ್.ಎಸ್.ಶಾಸ್ತ್ರಿ ಅವರಿಗೆ ಮನಸಾರೆ ಅಭಿನಂದಿಸುತ್ತಿದ್ದೇನೆ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments