ರಸ್ತೆಯಂಚಲಿ ಹಾಳೆಯಾರಿಸುವ ಅಜ್ಜಿ ಕಂಡಾಗಲೆಲ್ಲ ವಿಚಿತ್ರಾನುಭವ. ಸಣಕಲು ಮೈಕಟ್ಟಿನ,ಬೊಚ್ಚು ಬಾಯಿ ಬಾಯಿ ತುಂಬಾ ಎಲೆ ಅಡಿಕೆ ಮೇಲ್ಲುತ್ತಾ ಕಂಪೌಂಡಿನ ಸುತ್ತ ಬಿದ್ದಿರುವ ವಸ್ತುಗಳ ಅವಲೋಕನದ ಕತ್ತನ್ನು ಹೊರಳಿಸುತ್ತ ಅವಳಾರಿಸುವ ವಸ್ತುಗಳೆಲ್ಲ..ನಿರ್ಜೀವಿಗಳು..! ಮನೆಗೂ,ಮನಕೂ ಭಾರವಾಗಿ ನೂಕಲ್ಪಟ್ಟು. ರಸ್ತೆಯಂಚನ್ನು ಮುತ್ತಿರುವವೆಲ್ಲ, ಹೊಟ್ಟೆ ತುಂಬುತ್ತವೆಂದರೆ.... ಬದುಕ ಹೊಸೆಯ ಹೊರಟವಳಿಗಾಗಿ. ಒಂದು ಕ್ಷಣ ಮನ ಕಂಪಿಸಿತು... ಸೋತ ದೇಹದಲಿ ಎಲಬು ತೊಗಲು. ಸೀರೆಯು ಭಾರವೆಂಬಂತೆ ಹೆಗಲಿಗೊಂದು ಚೀಲ ನೇತಾಡುತ್ತಿತ್ತು.. ಕಬ್ಬಿಣ,ಪ್ಲಾಸ್ಟಿಕ್, ಪಟ್ಟಿ ರಟ್ಟು ಅವಳ ಬರುವಿಕೆಗಾಗಿ ಕಾದು ಬಿದ್ದಂತಿದ್ದವು ಯ್ಯಾವ ಸಂಕೋಚಗಳು ಬಂಧಿಸಿಲ್ಲ ಹಸಿವಿನ ಮುಂದೆ ಎಲ್ಲವು ಶೂನ್ಯ... ಅರೆಬರೆಯ ಕಂಗಳಲಿ ಕೈಗಳ ತಡವರಿಕೆ. ತಕ್ಕಡಿಯ ಹೊಯ್ದಾಟಕೆಲ್ಲ ಮಾನ್ಯತೆ. ಬೇಕು ಬೇಡಗಳೆಲ್ಲವ ನೀಗಿಸಿ ಮುಂದಾದವಳಿಗಿಲ್ಲಿ..ಬೇರೇನೂ ಬೇಕಿಲ್ಲ ಇಂದೋ ನಾಳೆಯೋ ಮರೆಯಾಗೋ ಜೀವಕೆ... ಯ್ಯಾವ ಭಯವಿಲ್ಲ. ಕೈ ಸನ್ನೆಯಲಿ ಕರೆದೊಂದು ತುತ್ತ ನೀಡಿದೆ ಅದೇನೋ ಹೊಳಪು ಮೊಗದಲಿ... ನಿಮ್ಮ ಹೊಟ್ಟಿ ತಣ್ಣಗಿರಲವ್ವಾ ಹರಸಿ ಮರೆಯಾದ ಅಜ್ಜಿ ಪುನಃ ಕಂಡಿಲ್ಲ ಎತ್ತ ಹೋದಳೋ..ಹಣ್ಣಾದ ಅಜ್ಜಿ ಯ್ಯಾರಿಗೂ ಹೇಳದೇ ಮಣ್ಣಾದಳೇ.. ಗಟ್ಟಿ ಜೀವ ಸಾಯದಿರಲೆಂಬ ಬೇಡಿಕೆ. ತುತ್ತು ಕೂಳಿಗೂ ಸ್ವಾಭಿಮಾನಿ..! ಬೇಡಿ ತಿನ್ನಲಿಲ್ಲ..ಕದ್ದು ತಿನ್ನಲಿಲ್ಲ ದುಡಿದು ತಿಂದವಳು ಕಾಣೆಯಾಗಿದ್ದು.. ಸಂಕಟವೊಂದೆಡೆಯಾದರೇ.. ಓಣಿ ಓಣಿ ಕೂಗುತ್ತಿರುವದು ಕೇಳುತ್ತಿಲ್ಲ.. ಕಸವನ್ನ್ಯಾರು ಎಸೆಯುತ್ತಿಲ್ಲವೆಂಬುದಿರಬಹುದೇ? ಪ್ರಪಂಚದ ಸುಖವ ಕಂಡವರ್ಯಾರು..? ಹಳೆ ಸಾಮಾನುಗಳ ಕೂಡಿಟ್ಟು .. ಯ್ಯಾರೋ ಕೂಗಿದರು ಅವಳೇ ಕೂಗಿದಂತಾಗಿ ರಸ್ತೆಯಂಚಿಗೆ ಹಣಕಿದ್ದಿದೆ... ಇನ್ಯಾರೋ ಕಂಡಂತಾಗಿ ಮರಳಿದ್ದಿದೆ.....
-ಶಿವಲೀಲಾ ಹುಣಸಗಿ ಯಲ್ಲಾಪುರ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವಶ್ರೀಮತಿ ಶಿವಲೀಲಾ ಹುಣಸಗಿಇವರು ಕವನ, ಲೇಖನ, ಪ್ರಬಂಧ, ಹಾಯ್ಕುಗಳು, ರುಬಾಯಿ, ಕಥೆ, ಲಹರಿ ಹೀಗೆಸಾಹಿತ್ಯದ ಹಲವು ಮಜಲುಗಳಲ್ಲಿ ತಮ್ಮ ಬರವಣಿಗೆಯ ಹರವನ್ನು ವಿಸ್ತರಿಸಿಕೊಂಡಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ಈಗಾಗಲೆ ಪ್ರಕಟಣೆಗೊಂಡಿದೆ. ಸೂಕ್ಷ್ಮ ಮಾನವೀಯಚಿಂತನೆಯ ನೆಲೆಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ನಡೆಸುವ ಇವರು ಭರವಸೆಯ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. - ಸಂಪಾದಕ
Tumba ista aitu
Sundara kavana
Tqu sir
ಸುಡದ ದೀಪ ಕವಿ ಗಣಪತಿ ಗೌಡ ಅವರ ಅರ್ಥಪೂರ್ಣ ಕವನವಾಗಿದೆ.ನಕಾರಾತ್ಮಕ ಚಿಂತನೆಯಿಂದ ಹೊರಬಂದು ಸಕಾರಾತ್ಮಕವಾದುದರ ಹುಡುಕಾಟದ ಅಭೀಪ್ಸೆ ಈ ಕವನದ್ದು. ಡಾ.ಶ್ರೀಪಾದ ಶೆಟ್ಟಿ