ಮೂರು ದಿನ
ಹಟ್ಟಿ ಯಲ್ಲಿ ಪವಡಿಸು
ಅಜ್ಜಿ ಮತ್ತು ಅವ್ವನ
ಫರ್ಮಾನು
ಮುಟ್ಟಬೇಡ ಬಾವಿ
ಕೆರೆಕಟ್ಟೆಯ
ಮಲಿನವಾಗುತ್ತದೆ
ಹೋಗಬೇಡ
ಶುಭಕಾರ್ಯಗಳಿಗೆ
ಅಪವಿತ್ರವಾಗುತ್ತದೆ
ದೇಗುಲದ ದ್ವಾರದ
ಬಳಿಯೂ
ನಿನ್ನ ನೆರಳನ್ನು
ಸೋಕಿಸಬೇಡ
ದೇಗುಲವೇ
ಮೈಲಿಗೆಯಾಗುತ್ತದೆ
ಅಂದು ಅಜ್ಜಿ ಮತ್ತು ಅವ್ವ
ಮಗುವಾಗಿದ್ದರು
ಇಂದು ಅವ್ವ
ಮತ್ತು ಅಜ್ಜಿ ಯಾಗಿದ್ದಾರೆ
ನೀತಿ ಸಂಹಿತೆಯ
ಜ್ವಾಲೆಯಲ್ಲಿ
ಬೆಂದು ಬೆಂಡಾಗಿದ್ದೇನೆ
ಮತ್ತೆ ಮಗುವಾಗ
ಬೇಕೆನಿಸುತ್ತದೆ
ದೊಡ್ಡವಳಾದ
ತಪ್ಪಿಗೆ.............!
___________________________________
ಅನಿಲ ಕಾಮತ
ಮೊಕ್ಕಾಂ ಸಿದ್ದೇಶ್ವರ
ಪೋ ತೊರ್ಕೆ581344
ತಾ.ಕುಮಟಾ
ಜಿಲ್ಲೆ ಉತ್ತರ ಕನ್ನಡ
Comentários