ಹುಟ್ಟುತ್ತಲೆ ತಾಯಿಯಾಗಿದ್ದಾಳೆ
ತಂದೆಯಂತೆ, ದೇವರಂತೆ, ಸರ್ವಸ್ವದಂತೆ ಪೊರೆಯುತ್ತಿದ್ದಾಳೆ ಆದರೂ ತಾಯಿಗೆ ಇಂದು ಸೀಮಂತವಂತೆ
ಎಲ್ಲರೂ ಹೆಣ್ಣಾಗುವ ಮುನ್ನ ಹೆಣ್ಣಾಗಿದ್ದಾಳೆ ಹಸಿರು ಹೊತ್ತಿದ್ದಾಳೆ
ಬಂಗಾರ ಬೈರೂಪದ ಮೋಹವಿಲ್ಲದೆ
ಎಲ್ಲರ ದಾಹ ಇಂಗಿಸಿದ್ದಾಳೆ
ಪ್ರತಿವರ್ಷವೂ ಮೈ ನೆರೆಯುತ್ತಾಳೆ ಅನುದಿನವೂ ಹಸಿರ ಸಾಕಿ ಹೊದ್ದು ಮಲಗುತ್ತಾಳೆ ಇಬ್ಬನಿಯ ನಡುಕ,ಬಿಸಿಲಿನ ಮರುಕ ಎರಡಕ್ಕೂ ಸೈ ಎನ್ನುತ್ತಾಳೆ
ಮೈ ಪುಳಕಗೊಳ್ಳುವಂತೆ ಗರ್ಭದರಿಸುತ್ತಾಳೆ ,ಜನುವಾಗುವಾಗಲೂ ನಗುತ್ತಾಳೆ ಹಸಿರ ಹಾಸಿಗೆಯಲ್ಲಿ
ಶ್ರೇಷ್ಠ ತಾಯ್ತನವ ಸಾರುತ್ತಿದ್ದಾಳೆ
ಹಕ್ಕಿಗಳ ಕಲರವಕ್ಕೆ ಜೋಗುಳ ಹಾಡುತ್ತಾಳೆ ,ಪ್ರಾಣಿಗಳ ಓಡಾಟಕ್ಕೆ ನಾಚಿ ಬಾಗುತ್ತಾಳೆ ,ಆಹಾ ಭೂಮಿ ತಾಯಿಯ ಸೀಮಂತವಂತೆ
ಬೀಜಗಳಿಂದ ಮೊಕೆಯೆಡೆಗೆ
ಅಂಕುರಗಳಿಂದ ಹೂವಿನೆಡೆಗೆ
ಈ ಎಲ್ಲವೂ ನನ್ನ ಹೆಣ್ತನವೆನ್ನುತ್ತಾಳೆ ಬೀಗುತ್ತಾಳೆ
*ಇಂದು ಭೂಮಿ ತಾಯಿಯ ಸೀಮಂತವಂತೆ*
*ಅರುಣ್ ಕೊಪ್ಪ*
೯೪೮೩೬೬೬೯೪೨
Comments