ಇಂದಿನ ಚುಟುಕುಗಳು

1.ಕುವೆಂಪು

ನಮ್ಮೆಲ್ಲರ ಹೆಮ್ಮೆಯ ರಾಷ್ಟ್ರಕವಿ ಕುವೆಂಪು!

ಹರಡಿದರು ಸುಮಧುರ ಕವನಗಳ ಕಂಪು!

ಮನ್ನಣೆ -ಮಾನ್ಯತೆ ಅಗಾಧ ಪಾಂಡಿತ್ಯಕ್ಕೆ!

ಜ್ಞಾನಪೀಠ ಮುಡಿಗೇರಿತು "ರಾಮಾಯಣ ದರ್ಶನಂ "ಮಹಾಕಾವ್ಯಕ್ಕೆ!!


2. ಪ್ರಕೃತಿ

ಮುಂಜಾನೆಯ ಮಂಜಿನಲಿ ನಸು ನಾಚಿದೆ ಭುವಿ!

ಹೊಂಗಿರಣವ ಹೊರಸೂಸಲು ಆಗಸದೇ ರವಿ!

ಮನಮೋಹಕ ಆ ಸೊಬಗಿಗೆ ನಾನಾಗುವೆ ಕವಿ!!


3. ತಾಳ್ಮೆ

ಬದುಕಲ್ಲಿ ಪ್ರತಿಕ್ಷಣವೂ ಇರಬೇಕು ಸಹನೆ!

ಪ್ರತಿ ಕೆಲಸದಲ್ಲೂ ಶ್ರದ್ಧೆ - ವಿವೇಚನೆ!

ಸಮಸ್ಯೆಗಳು ಬರುವವು ಅಡಿಗಡಿಗೆ ಬಾಳಲಿ!!

ಸಂತಸದ ಬದುಕು ಇದೆ ತಾಳ್ಮೆಯಿರಲು ಜೊತೆಯಲಿ!!


ಸಾವಿತ್ರಿ ಶಾಸ್ತ್ರಿ, ಶಿರಸಿ

0 views0 comments