'ಇಂಗು ತೆಂಗು ಇದ್ದರೆ ಮಂಗನು ಅಡುಗೆ ಮಾಡುತ್ತದೆ' ಅನ್ನೂ ಗಾದೆ ಮಾತು ಗೊತ್ತು ತಾನೇ? ಆದರೆ ಅದೇ ಇಂಗು ತಂದಿಟ್ಟ ಫಜೀತಿ ಇಲ್ಲೀ ಕೇಳಿ. ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಎಂದು ಹೊರವಲಯದಲ್ಲಿ ಆಫೀಸ್ ಇರುವವರು ಬೇಗನೆ ಹೊರಡುವದು ಸಾಮಾನ್ಯ. ನಾನು ಬೆಳೆಗ್ಗೆ 7ಕ್ಕೆ ಆಫೀಸಿಗೆ ಹೊರಡುದು ವಾಡಿಕೆ. ಆಗ ನನ್ನ ಮುದ್ದಿನ ಮಗಳು ನನ್ನ ಊಟದ ಡಬ್ಬದೊಂದೆಗೆ ಸ್ವಲ್ಪ ದೂರ ಬೀಳ್ಕೊಡಲು ಬರುವದು ಅಷ್ಟೇ ಸಾಮಾನ್ಯದ ದೃಶ್ಯ.
ಆದಕಾರಣ ಬೆಳೆಗ್ಗೆ 5.30ಕ್ಕೆ ಮನೆಯಲ್ಲಿ ಎಲ್ಲವೂ ಪ್ರಾರಂಭ. ಹಾಗೇ 6 ಘಂಟೆಗೆ ಮನೆಗೆಲಸಕ್ಕೆ ಇಬ್ಬರು ಅಕ್ಕ, ತಂಗಿ (ಉಮಾ ಮತ್ತು ಸುಮಾ) ಬರುತ್ತಿದ್ದರು. ಸುಮಾ, ಅವಳ ಅಕ್ಕನ ಸಹಾಯಕ್ಕ ಎಂದು. ಆದರೇ ತಂಗೀದು ತುಂಬಾನೇ ಕಾಟ, ಆಗೋದು ಬರೀ ಉಲ್ಟಾ ಮಾತ್ರ. ಆ ಕಟಾ ತಡೆಯೋದಕ್ಕೆ ನಮ್ಮ ಅತ್ತೇಯವರು ಸುಮಾಳನ್ನು ಅಂಗಳ ಅಥಾವ ಹೊರಗಡೆ ಕೆಲಸಕ್ಕೆ ಕಳಿಸುತ್ತಿದ್ರು . ಇದು ಅವಳ ಅಕ್ಕನೀಗೆ ಒಂದು ಥರಹದ ಸಹಾಯ.
ಒಂದು ದಿನ ಸುಮಾಳ್ ರಗಳೇ ಜಾಸ್ತೀ ಆಗೀ ಇಬ್ಬರ ಜಗಳ ಆಗೀ ಕೆಲಸವೆಲ್ಲ ಸ್ಟಾಂಡ್ ಸ್ಟಿಲ್. ಇದನ್ನ ತಿಳಿದ ನಮ್ಮ ಅತ್ತೆಯವರು ಸುಮಾಳನ್ನು ಕರೆದು ಕೈಗೆ ಒಂದಷ್ಟೂ ದುಡ್ಡ್ಕೊಟ್ಟು ಅಂಗಡೀಗೆ ಹೋಗಿ ಒಂದು ಇಂಗು ತೊಗೊಂಡು ಬಾ" ಎಂದು ಹೇಳಿ ಕಳಿಸಿದ್ರು ಅದೆನೋ ಅದೃಷ್ಟ, ಒಂದೇ ಆದೇಶಕ್ಕೆ ಸುಮಾ ಹೊರಟಳು.
ಆ ದಿನ ಬೆಳೆಗ್ಗೆ ನಾನು ಪೇಪರ್ ಹೆಡ್ಲೈನ್ಸ ನೋಡುತ್ತಾ ಹೊರಗಡೆ ಕುಳಿತಿದ್ದೆ. ಸುಮಾ ಗೇಟ್ ದಾಟಿ ಅಂಗಡಿಗೆ ಹೋದಳು. ಎಲ್ಲರೂ ತಂತಮ್ ಡ್ಯೂಟಿ ಶುರು ಮಾಡಿದ್ರು. ಒಂದು ಕೈಯಲೀ ಪೇಪರ್ ಮತ್ತೊಂದು ಕೈಯಯಲೀ ಟೀ ಕುಡಿಯುತ್ತ ಬ್ಯುಸಿ ಆಗಿದ್ದ ನನಗೆ ಮತ್ತೆ ಗೇಟ್ ಸಪ್ಪಳ ಕೇೆಳಿದಾಗ ಮುಖ ಮೇ ಲೆತ್ತಲು ಸುಮಾಳ ದರ್ಶನ. ಅವಳ್ಯ್ಯಾಕೂ ತುಂಟ ನಗೆ ಬೀರುತ್ತಾ ತಟ್ಟಂತ ಮತ್ತೆ ಹಿತ್ತಲಕ್ಕೆ ಓಡಿದಳು, ಅವಳ ಕೈ ಮೊದಲು ಹಿಂದಕ್ಕೆ ಹಾಗೂ ನನ್ನ ದಾಟಿದೊಡನೆ ಕೈ ಮುಂದೇ ಮಾಡೀ ಕೈಯಲ್ಲಿ ಏನು ಮುಚ್ಹಿ ಕೊಂಡಂತೆ ತೊರೀತು. ಅಸಲಿಗೆ ಅವಳ ನಗುವಿಗೆ ಕಾರಣ ತಿಳಿಯುವ ಇರಾದೆ ನನಗು ಇತ್ತು.
ಬೆಳಗಿನ ಅವಸರ ಮತ್ತು ಕ್ಯಾಬ್ ಸಮಯದ ಓತ್ತಡ, ಆ ತುಂಟ ನಗೆಯ ಹಿಂದಿನ ಕಾರಣ ಕೇಳುವ ಯೋಚನೆಯನ್ನು ಹಿಂದೆಕ್ಕೆ ತಳ್ಳಿ ನನ್ನನು ಮುಂದೇನು ನಡಿತದೆ ಎಂದು ನೋಡು ತವಕದಲೀತ್ತು.
ಅದೇನೂ ನಮ್ಮ ಅತ್ತೆಯವರ ಏರುಧ್ವನಿ ಕೇಳಿಸಿ ಏನೆಂದು ನನ್ನವಳನ್ನು ವಿಚಾರಿಸಿದಾಗ ಅವಳ ಆ ತುಂಟ ನಗೆಯ ಹಿನ್ನೆಲೆ ಪೂರ್ತಿ ಹೊಳಿತು.
ಆದ ಎಡವಟ್ಟು ಏನಂದ್ರೆ, ಅವಳನ್ನು ಕಳ್ಸೀ ಇಂಗು ತೊಗೊಂಡು ಬಾ ಅಂದ್ರೇ, ಸುಮಾ ತಂದೀದ್ದು ಕಿಂಗ್ ಸಿಗ್ರೇಟ್. ಅದನ್ನ ತಂದ ನಮ್ಮ ಅತ್ತೆ ಕೈಗೆ ಇಟ್ಟಾಗ, ನೀವೇ ಊಹಿಸಿಕೊಳ್ಳಿ ಅವರ ಸ್ಥಿತಿ.

ಆನಂದ್ ದೇಶಪಾಂಡೆ
ಬೆಂಗಳೂರು.
Comments