top of page

ಇರುವೆ ಕಾಳಗ

ಕೆಂಪಿರುವೆ ಕಪ್ಪಿರುವೆ

ಕೆಂಪನೆ ಕಪ್ಪನೆ ಮಣ್ಣಿನಲಿ

ಅಂದದ ಹುತ್ತವ ಕಟ್ಟಿ

ಬಾಳುತ್ತಲಿದ್ದವು ಒಟ್ಟಿಗೆ

ಚೆಂದದ ಸುಂದರ ಕಾಡಿನಲಿ


ಅನ್ನದ ಅಗಳ ಸಕ್ಕರೆ ಕಾಳು

ಸಿಕ್ಕರೆ ಸಾಕು ತಿನ್ನುತಲಿದ್ದವು

ಸ್ನೇಹದಿ ಒಟ್ಟಿಗೆ ಹಂಚಿ


ನೆಮ್ಮದಿ ಬದಕು ಸಾಗಲು

ಬಂದಿತು ಎರಡಲಿ ಜಂಭು

ನನ್ನಯ ಬಣ್ಣ ಸುಂದರ

ನಿನ್ನಯ ಬಣ್ಣ ಸುಂದರ

ಎನ್ನುತಾ ಕದನಕೆ

ನಿಂತವು ಕೋಪದಲಿ


ಕೆಂಪನೆ ಇರುವೆ ಒಂದು ಕಡೆ

ಕಪ್ಪನೆ ಇರುವೆ ಒಂದು ಕಡೆ

ಹತ್ತಿತು ಕದನ ಕಟ್ಟ ಕಡೆ


ಕೆಂಪನೆ ಇರುವೆ ಬಂದು

ಕೆಡವಿತು ಕಪ್ಪನೆ ಹುತ್ತಾ

ಕಪ್ಪನೆ ಇರುವೆ ಹೋಗಿ

ಕೆಡವಿತ್ತು ಕೆಂಪನೆ ಹುತ್ತಾ


ಕದನ ಹತ್ತಿತು ಕಟಾ ಕಟಾ

ಬಂದಿತು ಮಳೆಯು ರಪಾ ರಪಾ

ತೊಯಿತು ಭೂಮಿ ಥಪಾ ಥಪಾ


ಮನೆಯೆ ಇಲ್ಲದ ಇರುವೆಗಳು

ಹರಿಯುತ ನಡೆದವು ನೀರಲ್ಲಿ

ಸತ್ತವು ಹಲವು ಇರುವೆಗಳು

ಕಷ್ಟವೆ ಕಷ್ಟ ಎಲ್ಲ ಕಡೆ


ಹರಿಯುತ ನಡೆದ ಇರುವೆಗಳ

ನೋಡಿತು ಗೆಳೆಯ ಪಾರಿವಾಳ

ಬೀಸಿತು ಎರಡು ಎಲೆಯನ್ನು

ಕೂತವು ಇರುವೆ ಎಲೆಯಲ್ಲಿ

ಮೆಲ್ಲಗೆ ಬಂದವು ದಂಡೆಯಲಿ


ಧನ್ಯವ ನಮಿಸಿ ಗೆಳೆಯನಿಗೆ

ನಡೆದವು ಎಲ್ಲವು ಹುತ್ತಿನಡೆ

ಜಂಭವ ಬಿಟ್ಟ ಇರುವೆಗಳು

ಬದುಕಲು ಕಲಿತವು ಸ್ನೇಹದಲಿ

ಸಾಗುತಲಿದ್ದವು ಶಾಂತಿಯಲಿ.


- ಮಲಿಕಜಾನ ಶೇಖ, ಅಕ್ಕಲಕೋಟೆ, ಸೊಲ್ಲಾಪುರ


ಮಲಿಕಜಾನ ಶೇಖ ಅವರು ಗಡಿನಾಡಿನ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನವರು. ಇವರು ಮರಾಠಿ ನೆಲದಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕನ್ನಡ ಬಳಗ ಕಟ್ಟಿಕೊಂಡು ಗಡಿನಾಡಿನಲ್ಲಿ ಕನ್ನಡ ಬೆಳೆಸುವ ಕಾಯಕದ ಜೊತೆ ಸಾಹಿತ್ಯದಲ್ಲಿ ಅನುವಾದ, ಮಕ್ಕಳ ಸಾಹಿತ್ಯ ಮತ್ತು ವಿವಿಧ ಪತ್ರಿಕೆಗಳಿಗೆ ಲೇಖನ ಬರೆದಿದ್ದಾರೆ.ಕನ್ನಡದ ಕಟ್ಟಾಳು,ಕವಿ,ಸಂಘಟಕ,ಸಹೃದಯಿ ಮಲಿಕಜಾನ ಶೇಖ ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.

165 views2 comments

2 Comments


thambaddc
thambaddc
Jul 26, 2020

ಇರುವೆಗಳ ಕಾಳಗ ಹಾಗೂ ಮಳೆಯಲ್ಲಿ ತೋಯಿದು ನೀರಲ್ಲಿ ಹರಿಯವ ಇರುವೆಗಳಿಗೆ ಪಾರಿವಾಳ ಬೀಸಿದ ಎಲೆಗಳಿಂದ ಮೇಲೆ ಬಂದು ಶಾಂತಿ ಹಾಗೂ ಸ್ನೇಹದಿಂದ ಬದುಕಿನ ಪಾಠವನ್ನು ಕಲಿಸಿದ ಈ ಪದ್ಯ ಚೆನ್ನಾಗಿ ಹಾಗೂ ಸ್ವಾರಸ್ಯಕರ ಹಾಗೂ ಆನಂದಾಯಕವಾಗಿ ಮಕ್ಕಳಿಗೆ ತಿಳಿಯುವಂತೆ ಮೂಡಿ ಬಂದಿದೆ ಗುರುಗಳೇ ಧನ್ಯವಾದಗಳು.... ತುಂಬಾ ಉತ್ತಮ ಕವನ

Like

malikjan shaikh
malikjan shaikh
Jul 26, 2020

ಕವಿತೆ ಪ್ರಕಟಣೆ ಮಾಡಿದ್ದಕ್ಕೆ

ಆಲೋಚನೆ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು...

Like
bottom of page