ಒಡಲಲ್ಲಿ ನಿನ್ನ ಕುಲದ ಕುಡಿಯನು ಜತವಾಗಿಸಿಕೊಂಡಿರುವೆ ನಿನ್ನ ಕೆಣಕಿಸಿ ಜನರು ಉಡಾಫೆಯ ನಗು ನಕ್ಕರು ನಿನ್ನನ್ನು ನಾನು ಸಂತೈಸಿರುವೆ
ತಾಳ್ಮೆ ಕಳೆದುಕೊಂಡು ಸೋತ ಮೊಗವ ಹೊತ್ತು ಮನೆಯ ಮೂಲೆ ಸಂಧಿಯಲಿ ಕೂತಾಗ ನಗುವಲ್ಲೇ ತೇಲಿಸಿದ್ದೇನೆ
ಮದಿರೆಯಲಿ ಮಿಂದೆದ್ದಾಗ ನಿನ್ನ ಮರ್ಯಾದೆ ಮುಕ್ಕಾಗದ ಹಾಗೆ ನಟಿಸಿದ್ದೇನೆ ಕೋಪಾಗ್ನಿಗೆ ಬೆನ್ನ ಮೇಲಿನ ಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ
ನಿನ್ನ ಬರುವಿಕೆಗಾಗಿ ಅದೆಷ್ಟು ಇರುಳನ್ನು ಏಕಾಂತದಲ್ಲೇ ಕಳೆದಿದ್ದೇನೆ ನಿನ್ನ ಕಾಮದ ಜ್ವಾಲಾಮುಖಿಗೆ ಸುಟ್ಟು ಕರಕಲಾಗಿದ್ದೇನೆ ನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು.......
______________________ _____________
ಅನಿಲ ಕಾಮತ
Comments