ಮಳೆಗಾಲದ ಆರಂಭ.
ವರ್ಷಕೊಂದಿನ
ಖುಷಿಯ ಪೂರಣ
ಹೂವ ತೋರಣ
. ಕಟ್ಟಿದೆ.
ನಿತ್ಯ ನೋವಿನ
ನರಕದೊಳಗೂ
ಸಗ್ಗ ಬಾಗಿಲ
ತೆರೆದಿದೆ.
ಸುತ್ತ ಮುತ್ತಲು
.ಭಯದ ಹುತ್ತವು
ಬಿಟ್ಟು ಬಿಡದಲೆ
ಬೆಳೆದಿದೆ-
ನಡುವೆ ಕತ್ತಲ
.ಮೊತ್ತದೊಳಗೂ
ಬೆಳಕ ಕಿಂಡಿಯು
ಕಂಡಿದೆ.
ಕನಸ ಬಣ್ಣವು
ಕರಗಿಹೋಗಿದೆ
ಬಸಿರ ಬವಣೆಯ
ಮಳೆಯಲಿ-
ಹಸಿರು ಮೊಳೆತಿದೆ
ಉಸಿರ ತುಂಬಿದೆ,
.ಸೋತು ಸೊರಗಿದ
ಬಸಿರಲಿ.
ಸಾಲು,ಸಾಲಲಿ
ನೇಣಿಗೇರಲು
ಕೊರಳದೆಷ್ಟೋ
ಕಾದಿವೆ-
ಸಾವ ನೆರಳಲು
ನೋವ ನರಳಲು
ಆಸೆ ಹೂಗಳು
ಅರಳಿವೆ.
ವರ್ಷಕೊಂದಿನ
ಹರ್ಷ ಪೂರಣ
ಹೂವ ತೋರಣ
ಕಟ್ಟಿದೆ--
ನಿತ್ಯ ನರಕದ
ಬದುಕಿನೊಳಗೂ
. ಸಗ್ಗ ಬಾಗಿಲ
ತೆರೆದಿದೆ...!!!
ಅಬ್ಳಿ ಹೆಗಡೆ

..
Comments