top of page

ಆಸೆಯೇ ಸುಖದ ಮೂಲ

ದೀರ್ಘ ರಸ್ತೆಯಲಿ

ಹರಡಿಕೊಂಡಿದೆ

ಮೌನ ಸಾಮ್ರಾಜ್ಯ

ಆಳುವ ದೊರೆಗಳೇ ಇಲ್ಲ;


ಅಲ್ಲಲ್ಲಿ ಮಲಗಿಕೊಂಡ

ಒಂದೆರಡು ಶ್ವಾನಗಳು,


ರಸ್ತೆ ಬದಿಗಳಲ್ಲಿ

ಒಗೆದ

ಮಾರಾಟವಾಗದ

ಕೊಳೆತ ತರಕಾರಿಗಳು,


ಏನೂ ತೋಚದೆ

ಸುಮ್ಮನೆ ನಿಂತುಕೊಂಡ

ಒಂದಿಷ್ಟು ಮರಗಳು,


ಅಸಹಾಯಕವಾದ ಕೆಲ

ಸಂಸಾರಗಳ ಹೊತ್ತು

ಕಾಲ ನೂಕುತ್ತಿರುವ

ಅಪಾರ್ಟ್ಮೆಂಟ್ ಗಳು,


ಅದರೊಳಗೆ ಒಂದಿಷ್ಟು

ನಿರ್ಜೀವ ಜೀವಿಗಳ

ಇಟ್ಟುಕೊಂಡು

ಉಸಿರುಗರೆಯುತ್ತಿರುವ

ಬದುಕು...


ಆದರೂ.....

ಸತ್ತಿಲ್ಲ ಜಗತ್ತು..‌‌..

ಬದುಕಿನ ಭರವಸೆಗಳಿನ್ನೂ

ಉಳಿದುಕೊಂಡಿವೆ..

ಹೌದು ,

ನಾವು ಬದುಕುತ್ತೇವೆ

ಎಲ್ಲಿಯವರೆಗೆಂದು

ಕೇಳಬೇಡಿ...

ಆಸೆಯೇ ಸುಖದ ಮೂಲ!

ಚಿತ್ರ- ಕವನ - ಎಲ್. ಎಸ್. ಶಾಸ್ತ್ರಿ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page