ಮುನಿಸುಗೊಂಡು
ಮನಸು ಮುಚ್ಚಿದಾಗ-
ಆಸೆ ಕದತೆರೆದು
ಕರೆಯುತ್ತದೆ..ಸುಂದರ
ಕನಸುಗಳನ್ನ....
ಸಾಂತ್ವನ ಹೇಳುವದಕ್ಕೆ....
ಬಣ್ಣದ ರಂಗೋಲಿ ಬಿಡಿಸಿ,
ಖುಷಿ ಪಡುವದಕ್ಕೆ....
ಖಾಲಿ ಬಾನಲ್ಲಿ ಚುಕ್ಕಿಗಳ
ಚೆಲ್ಲಾಡುವದಕ್ಕೆ....
ಪೇಲವ ಮುಖದ
ಒಣಗಿದ ತುಟಿಗೆ
ಹೂ ಮುತ್ತನೊತ್ತಿ,
ಹಸಿ,ಹಸಿಯಾಗಿಸುವದಕ್ಕೆ....
ಮಾಗಿಯ ಚಳಿಗೆ
ನಡುಗುವ ಮೈ,ಮೈ-
ಸ್ಪರ್ಶಿಸಿ,ಬೆಂಕಿಯಕಿಡಿ-
ಹೊತ್ತಿಸಿ,.........
ಬೆಚ್ಚಗಾಗಿಸುವದಕ್ಕೆ.....
"ಅರ್ಥ"ವಾಗದ್ದನ್ನು
ಅರ್ಥವಾಗಿಸುವದಕ್ಕೆ....
"ಅಸಹ್ಯ"ವೆನಿಸಿದ್ದನ್ನೂ
ಸಹ್ಯವಾಗಿಸುವದಕ್ಕೆ......
"ಆಸೆ" ಕದತೆರೆದು,
ಕರೆಯುತ್ತದೆ..ಸುಂದರ
ಕನಸುಗಳನ್ನ....!
--ಅಬ್ಳಿ,ಹೆಗಡೆ.**
Comments