ಆ ಮಾಮರದಂತ ಆವರಣದಲ್ಲಿ
ಹತ್ತಾರು ಹೊಸ ಹೂಗಳು ಕಮಲಗಳಂತೆ
ಬಿರಿದಿದ್ದವು, ಅಲ್ಲೂ ಕೋಗಿಲೆಯೆಾಂದು
ಕೋಮಲ ಗಾಂಧಾರದಲ್ಲಿ ಸ್ವರ ಹೊರಡಿಸುತ್ತಿತ್ತು.
ಮಳೆಯ ತರು ಹೂವಿನ ಮೇಲೆ
ಹನಿಗಳು ಪನ್ನೀರಿನ ಹಾಗೆ ಕುಳಿತ್ತಿದ್ದವು,
ದೇವಲೋಕದಿಂದ ಜಾಗ ಮಾಡಿಕೊಂಡ
ಸ್ವರ್ಗದಿಂದ ಸೀದ ಜಾರಿ ಹನಿಹನಿಯಾಗಿ
ಅವುಗಳ ಮೇಲೆ ಮುತ್ತಿನಂತೆ ಕುಳಿತಂತೆ.
ಮಳೆಗೆ ಮಣ್ಣಿನ ಗುಣ ಹೆಚ್ಚು
ಇಡೀ ರಾತ್ರಿ ಸುರಿದ ಜಿಬ್ಬು ಮಳೆಗೆ
ಉಬ್ಬಿದ ಹಾಗೆ ಭೂಮಿ, ರಾತ್ರಿಯೆಲ್ಲ
ನೆನೆದುಕೊಂಡು ಬೆಳಗ್ಗೆ ಅರಳಿತ್ತು ಸೊಂಪಾಗಿ.
ಬಿಳಿ ಹೂಗಳನ್ನು ಬರುವ ತಿಂಗಳಿಗೆ
ಅರಳುವವಿದ್ದವು, ಕೆಂಪು ಮಲ್ಲಿಗೆ ವಸಂತದಲ್ಲಿ
ರಂಜೆ, ಮೇ ಹೂಗಳ ಜೊತೆ ಅರಳಿ
ಒಂದೊಂದೂ ಹೂಗೊಂಚಲು ಬಿಡುತ್ತಿತ್ತು.
ಕಣಗಿಲೆಗೆ ಸುಗ್ಗಿ ಪುನರ್ವಸುವನು
ಸುರಿಸಿಕೊಂಡು ಶ್ರಾವಣ ಸಂಭ್ರಮದ
ಮಳೆ ತೀರ್ಥಪಡೆದು ಪಂಚಮಿಯ
ಹಿಂದೆ, ಆನಂತರ ನಗು ತಿಳಿಸುವ ಹೂಬಿಡುವಂತೆ.
ಲಕ್ಷ್ಮಿ ದಾವಣಗೆರೆ
Comments