ಉ.ಕ.ಜಿಲ್ಲಾ ೨೩ ನೇಯ ಸಾಹಿತ್ಯ ಸಮ್ಮೇಳನ ಹೊನ್ನಾವರ
" ಆತ್ಮನೊ ಮೋಕ್ಷಾರ್ಥಂ ಜಗದ್ದಿತಾಯಚ" - ಶ್ವೇತಾಶ್ವತರ ಉಪನಿಷತ್ತು.
ಆತ್ಮನ ಉದ್ದೇಶ ಮೋಕ್ಷವನ್ನು ಸಂಪಾಸುವುದು.ಅದರೊಂದಿಗೆ ಜಗತ್ತಿನ ಹಿತವನ್ನು ಮಾಡುವುದು. ಉಪನಿಷತ್ತಿನ ಈ ವಾಖ್ಯವನ್ನು ಉಚ್ಚರಿಸುತ್ತ ಸ್ವಾಮಿ ವಿವೇಕಾನಂದರು ಸನ್ಯಾಸವನ್ನು ಸ್ವೀಕರಿಸಿದರು.
ಸಂತೋಷವನ್ನು ಪ್ರಾಜ್ಞರಾದವರು ತಾವೆ ಉಂಟು ಮಾಡಿಕೊಳ್ಳುತ್ತಾರೆ. ಆನಂದಮಯವಾದ ಸ್ಥಿತಿಯನ್ನು ಪಡೆಯುವಲ್ಲಿ ಮನುಷ್ಯನಾವನ ಪ್ರಯತ್ನ ನಿರಂತರವಾಗಿ ನಡೆದಿದೆ. ಹಾಗಾದರೆ ಆನಂದ ಎಲ್ಲಿ ಸಿಗುತ್ತದೆ.ಯಾವ ವಸ್ತುವನ್ನು ಪಡೆಯುವುದರಿಂದ ಆನಂದ ಸಿಗುತ್ತದೆ? ಇದು ಪ್ರಶ್ನಾರ್ಥಕವಷ್ಟೆ ಅಲ್ಲ ಉದ್ಗಾರ ವಾಚಕವು ಹೌದು.
ಇಷ್ಟು ದೊರಕಿದರೆ ಮತ್ತಷ್ಟರಾಶೆ. ಅಷ್ಟು ದೊರಕಿದರು ಇನ್ನಷ್ಟರಾಶೆ
ಆಶಿಗೆ ಅಂತ್ಯವಿಲ್ಲ. ಬೆಂಕಿಗೆ ತುಪ್ಪ ಸುರಿದಂತೆ ಅದನ್ನು ಪೂರೈಸಿದರೆ ಮತಗತಿಷ್ಟು ಆಸೆಗಳು ಮೊಳೆಯುತ್ತವೆ. ಅದಕ್ಕೆ ಅನುಭವಿಗಳು ಸಂತೋಷ ಯಾವುದೆ ವಸ್ತುವಿನಲ್ಲಿಲ್ಲ.ಅದು ನಮ್ಮೊಳಗೆ ಇದೆ.(" Joy is not in things it is with us" ) ಆ ಕಾರಣ ನಾವು ಚಿರವಾದ ಆನಂದದ ಪ್ರಾಪ್ತಿಗೆ ಬಯಸ ಬೇಕು. ಮಹಾಕವಿ ಕುವೆಂಪು ಅವರು ರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಮೂಲಕ ಅಂತಹ ಆನಂದವನ್ನು ಪಡೆದರು."ಯತೊ ವಾಚೊ ನಿವರ್ತಂತೆ ಅಪ್ರಾಪ್ಯ ಮನಸಾ ಸ:" ಎಂಬ ಹಾಗೆ. ಆತ್ಮ ಸುಖಕ್ಕೆ ಪೂರಕವಾದ ಸುಖದ ಕಡೆಗೆ ನಮ್ಮ ತ್ರಿಕರಣಗಳು ತುಡಿಯ ಬೇಕು.
" ಯೊ ತೌ ಭೂಮಾ ನಾಲ್ಪೆ ಸುಖಮಸ್ತಿ" ಎಂಬ ಮಾತಿನಂತೆ.
ಉತ್ತರ ಕನ್ನಡ ಜಿಲ್ಲಾ ೨೩ ನೇಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ೨೦೨೩ ನೆ ಇಸ್ವಿ ಡಿಸೆಂಬರ ೨೭ ಮತ್ತು ೨೮ ರಂದು ನನ್ನ ತಾಲೂಕು ಈಗ ಊರು ಆಗಿರುವ ಹೊನ್ನಾವರದ ಪ್ರಭಾತ ನಗರದ ಮೂಡುಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ನಿಮ್ಮೊಡನೆ ಕಲೆತು ಮಾತನಾಡುವ,ನಿಮ್ಮೆಲ್ಲರನ್ನು ಕಣ್ತುಂಬಿಕೊಳ್ಳುವ ಆ ಕ್ಷಣಕ್ಕಾಗಿ ಹಂಬಲಿಸುತ್ತಿದ್ದೇನೆ. ಸಾಹಿತ್ಯ ಸಮ್ಮೇಳನದ ಅದ್ದೂರಿಯ ಸಮಾರಂಭ ಮಾನ ಸನ್ಮಾನ ಮೆರವಣಿಗೆ ಅಭಿನಂದನೆ ಇವೆಲ್ಲವು ನನ್ನ ಎದೆಯಲ್ಲಿ ತಂಪಾಗಿರಲಿ ಅದು ನನ್ನ ತಲೆಗೆ ಸೇರದಿರಲಿ. ಈ ಸಮ್ಮೇಳನದ ಸರ್ವಾಧ್ಯಕ್ಷತೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅರ್ಥಪೂರ್ಣ ಹಾಗು ಸತ್ವಶಾಲಿಯಾದ ಕೃತಿಗಳ ರಚನೆಗೆ ಪ್ರೇರಣೆಯಾಗಲಿ ಎಂದು ಭಾವ ಚಿಂತಾಖನಿಯು ಬ್ರಹ್ಮ ಮಾನಸ ಮಹದ್ಗರ್ಭ ಸಂಭವೆಯು ಆದ ಶಾರದೆಯಲ್ಲಿ ಪ್ರಾರ್ಥಿಸುತ್ತೇನೆ.
ಡಾ.ಶ್ರೀಪಾದ ಶೆಟ್ಟಿ
ಅಭಿನಂದನೆಗಳು ಸರ್.ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ,ನೆಲ,ಜಲ, ಅಭಿವೃದ್ಧಿಯ ಕುರಿತು ಮುನ್ನೋಟ ನಿಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಅನಾವರಣಗೊಳ್ಳಲಿ.