ಆಲೋಚನೀಯ-೩೩


ಆಲೋಚನೀಯವನ್ನು ನಿಮಗೆ ತಲುಪಿಸುವಲ್ಲಿ ಆದ ವಿಳಂಬಕ್ಕೆ ನಿಮ್ಮ ಕ್ಷಮೆ ಕೇಳಿ,ನನ್ನ ವಿಚಾರಗಳನ್ನು ದಾಖಲಿಸುತ್ತಿದ್ದೇನೆ. ನಾವು ಹರ ಸಾಹಸ ಮಾಡಿದರು ಕೆಲವರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಾಗಲಾರದು ಎಂಬ ಸತ್ಯದ ಮನವರಿಕೆಯಾಗಿದೆ. ಭೌತಿಕ ಸುಖವೊಂದೆ ನಿಜ ಎಂದು ನಂಬಿದವರು ಒಣಜಂಬ ಮತ್ತು ಹುಸಿ ಪ್ರತಿಷ್ಠೆಯಲ್ಲಿ ಕಳೆದು ಹೋಗುತ್ತಿರುವ ಬಗ್ಗೆ ಅಂತವರ ಬಗ್ಗೆ ಮರುಕ ಹುಟ್ಟುತ್ತದೆ.I pity you ಎಂಬುದು ಇಂಗ್ಲೀಷಿನ ಅತ್ಯಂತ ಕೆಟ್ಟ ಬಯ್ಗಳ ಎಂದು ಹೇಳಲಾಗುತ್ತದೆ.ಆದರೆ ಅದನ್ನು ಅರ್ಥಮಾಡಿ ಕೊಳ್ಳಲಾರದವರು ಹಲವರಿದ್ದಾರೆ.


" ಬೆಳವಣಿಗೆಯಾಗಬೇಕಾದರೆ ಆಸೆಗಳು,ಹಳೆಯ ಅಭ್ಯಾಸಗಳು,ದುಷ್ಟವೃತ್ತಿಗಳು,ಉದ್ವೇಗಗಳು ಮುಂತಾದವುಗಳಿಂದ ಕೂಡಿದ ಕ್ಷುದ್ರ ಮನಸ್ಸಿನೊಡನೆ ಹೋರಾಡಬೇಕಾಗುತ್ತದೆ. ನಾವು ಕ್ಷುದ್ರ ಮನಸ್ಸಿನಿಂದ ಪ್ರತ್ಯೇಕವಾಗಬೇಕು.ಉನ್ನತ ಮನಸ್ಸಿನೊಂದಿಗೆ ನಮ್ಮನ್ನು ಒಂದಾಗಿಸಿಕೊಳ್ಳಬೇಕು

ಮತ್ತು ಬುದ್ಧಿಶಕ್ತಿಯನ್ನು(ಇಚ್ಛೆ) ಪ್ರಯೋಗಿಸಬೇಕು. ಹೀಗೆ ಮಾಡುತ್ತಾ ಹೋದಂತೆ ನಮ್ಮ ವ್ಯಕ್ತಿತ್ವ ಬೆಳೆಯುತ್ತ ಹೋಗುತ್ತದೆ.ಇದಕ್ಕಾಗಿ ನಾವು ನಮ್ಮ ಮನಸ್ಸನ್ನು ನಮ್ಮ ಹಿಡಿತಕ್ಕೆ ತಂದು,ಹಳೆಯ ಅಭ್ಯಾಸಗಳನ್ನೆಲ್ಲ ತೊಡೆದು ಹಾಕಿ,ಹೊಸ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.ಇದೊಂದು ದೊಡ್ಡ ಹೋರಾಟ.ಈ ಹೋರಾಟದ ಮೂಲಕ ನಾವು ನಮ್ಮ ಆಂತರಿಕ ದಿವ್ಯತೆಯನ್ನು ಪರಿಪೂರ್ಣತೆಯನ್ನೂ ಹೊರಗೆ

ವ್ಯಕ್ತಪಡಿಸುತ್ತ ನಿಜವಾದ ಅರ್ಥದಲ್ಲಿ ಸುಸಂಸ್ಕೃತರೂ ನಾಗರೀಕರೂ ಆಗುತ್ತೇವೆ. ನಮ್ಮ ಅಂತ: ಕರಣ ಪರಿಶುದ್ಧವಾದಂತೆಲ್ಲ.ಆಂತರೀಕ ದಿವ್ಯತೆ ಹೆಚ್ಚು ಹೆಚ್ಚು ವ್ಯಕ್ತವಾಗುತ್ತ ಬರುತ್ತದೆ". ಸ್ವಾಮಿ ವಿವೇಕಾನಂದ.

ಸಿಡಿಲ ಮರಿ ಸ್ವಾಮಿ ವಿವೇಕಾನಂದರ‌ ಈ ಮಾತುಗಳು ನಮ್ಮ ಬಾಳಿನ ಪಯಣಕ್ಕೆ ಕೈ ದೀಪವಾಗಲಿ.


ಡಾ.ಶ್ರೀಪಾದ ಶೆಟ್ಟಿ.

30 views1 comment