ತುರಿಕಜ್ಜಿ ನವೆ
ಬೆಳಗ್ಗಿನಿಂದ ಸಂಜೆ ವರೆಗೆ
ತುರಿಸುತ್ತ ಕೂರುವುದು
ಕೀವು ಬಸಿಯುವುದು
ತುರಿಸುವುದು ರಾತ್ರಿ ಪುನಃ
ನವೆ ಹೊಸ ಜಾಗದಲ್ಲಿ
ಬಹುಶಃ ರಕ್ತ ಕೆಟ್ಟಿದೆ
ತೆಗೆದುಕೊಳ್ಳಬೇಕು ಔಷಧ
ಭೇದಿಗೆ
ಆಮೇಲೆ ಉಪವಾಸ
ಕೂರಬೇಕಾಗಬಹುದು ಮೂರು ದಿನ
ದ್ರವಾಹಾರ ಸೇವಿಸುತ್ತ
ಕುಡಿಯಬೇಕು ಖಾಲಿಹೊಟ್ಟೆಗೆ
ಕಹಿಯೇ ಇರಬಹುದು
ದೇಹಕ್ಕೆ ಒಳ್ಳೆಯದು
ಕಟುಕರೋಹಿಣಿ ಕಷಾಯ
ಶ್ರದ್ಧೆಯಿದ್ದರೆ ಯೋಗವೂ ಒಳಿತು
ಐವತ್ತರ ಮೇಲೆ
ಬಹಳ ಮುಖ್ಯ ಮಾನಸಿಕ ಆರೋಗ್ಯ
ಆಮೇಲೆ ದೈಹಿಕ
ಏಳುವುದು ಕಷ್ಟ
ಮಲಗಿದರೆ
ಏಳುವುದು ಒಳ್ಳೆಯದು ನಿಧಾನ ಬಲಮಗ್ಗುಲಲ್ಲಿ
ಎಡಕ್ಕೆ ಹೃದಯ
ಹೆಚ್ಚು ಒತ್ತಡ ಹಾಕುವುದು ಒಳ್ಳೆಯದಲ್ಲ!
ಪ್ರಾರ್ಥನೆ ಏಕಾಂತಧ್ಯಾನ
ಮತ್ತು ತುಸು ಸಾವಧಾನ
ಮಾಡಿದರೆ ಒಳ್ಳೆಯದು
ನಮಗೆ
ಮತ್ತು ನಮ್ಮ ಹಿತವರಿಗೆ.
-ಡಾ. ವಸಂತಕುಮಾರ ಪೆರ್ಲ
Comments