ಆದಾವಿಚಾ.....

ಯಾಕೆ

ಸುಮ್ಮನೇ ನಿನಗೆ

ಅವರಿವರ

ಮನೆಯ

ಒಳಗಿನದೋ

ಅಥವಾ

ಹೊರಗಿನದೋ

...............?


ನಿನ್ನ ಕಾಲ

ಬುಡದಲ್ಲೇ

ಅಂದರೆ ಅಡಿಯಲ್ಲೇ..

ಗುಂಬಳಿಸಿ

ನಾರಿನಾತ(ಥ)

ಆಗಿದೆಯಂತೆ..!

ಹೀಗಿರುವಾಗ

ನಿನಗೇಕೆ

ಬೇರೆಯವರ

.............?

ಅಪಕಾರವಿಲ್ಲ

ನಿಜ......!

ಉಪಕಾರವೇ

ಇಲ್ಲದ ಪಾತ್ರ...!

ಹೊರಗೆ

ಇದ್ದರೂ ದಪ್ಪಗೆ!

ಒಳಗೆ

ಏನೂ ಸಾಲದ

ಗಾತ್ರ...!

ನೀನೂ...,ನಿನ್ನ....

ಅವರೂ.........,

ಲಾಭವಿದ್ದರೆ ಅಷ್ಟೇ

ಬಳಸೋ

ಗೋತ್ರ...!

ಯಾಕಾದರೂ ಬೇಕು

ನಿನಗೆ

ಬಾಜೂಮನೆಯವರ

..................?

ಆರು

ನಿನಗೀ

ಹೆಸರನಿಟ್ಟವರು..?

ಇಟ್ಟು

ತೊಟ್ಟಿಲನು

ತೂಗಿದವರು....?

ನಿನ್ನ ಬಗೆದರೆ

ಕೇಡು,

ಬೇರೆ ಮಾಡಿದರೆ,

ಹೊರಗೆ

ಬರುವವ

ಆ...ರವಾ...?

ಆ..ಥರ...ದಾ..ವಿ..ಚಾ...ರವಾ?___ಜಿ.ಎಸ್.ಹೆಗಡೆ,ಕಣ್ಣಿ.✍️

9 views0 comments