ಆಡುತ್ತಾಳೆ ಮಗಳು.

ತಾಯ್ತನದ ಸುಖವ

ನನಗೆ ಧಾರೆ ಎರೆದು

ಖುಷಿಯನ್ನ ಮಡಿಲಿಗೆ

ತುಂಬಿದವಳು ನನ್ನ ಮಗಳು


ಅಂಬೆಗಾಲಲಿ ನಡೆದು

ಮನಸ್ಸಿಗೆ ಮುದ ನೀಡುತಿದ್ದವಳು

ಇಂದು ಬೆಳೆದು ದೊಡ್ಡವಳಾಗಿ

ನನ್ನ ಗೆಳೆತಿಯಾಗಿ ಜೊತೆಗಿರುವಳು


ಬಾಲ್ಯದಲ್ಲಿ ತನ್ನೆಲ್ಲ ಆಸೆಗಳ

ಹಠ ಮಾಡಿ ಈಡೇರಿಸಿಕೊಳ್ಳುತ್ತಿದ್ದವಳು

ಇಂದು ನನ್ನೆಲ್ಲ  ಆಸೆಗಳನರಿತು

ತಾನೆ ಈಡೇರಿಸುತಿರುವಳು


ಧಾರೆ ಎರೆಯುವ ಸಂಧರ್ಭದಲ್ಲಿ

ಧುಮ್ಮಿಕ್ಕುವ ನನ್ನ ಕಣ್ಣೀರ ಕಂಡು

ಓಡಿ ಬಂದು ನನ್ನ ಬಿಗಿದಪ್ಪಿ

ಜೊತೆಯಲ್ಲೇ ಕಣ್ಣೀರ ಹರಿಸಿದವಳು


ಹೆರಿಗೆಯ ನೋವುಂಡು ಬಂದರೂ

ನಗುತ್ತಲೇ ನನ್ನ ನೋಡಿ

ನನಗೂ ಹೆಣ್ಣು ಹುಟ್ಟಿದೆ

ಎಂಬ ಸಂತಸದಿಂದ ಬೀಗಿದವಳು


ಎಷ್ಟು ಜನರು ಕೊಟ್ಟಾರು ಹೇಳಿ

ಕಷ್ಟವೆಂದಾಗ ಹೆತ್ತವರಿಗೆ ಹೆಗಲು

ಪುಣ್ಯ ಮಾಡಿದವರ ಒಡಲಲ್ಲಿ   ‌‌           

ಮಾತ್ರ ಆಡುತ್ತಾಳೆ  ಮಗಳು


    ಸೌಜನ್ಯ ನಾಯಕ, ಅಂಕೋಲಾ

200 views0 comments