top of page

🤣 ಅಂದಮೇಲೆ ಇರಲೇಬೇಕು [ಹಾಸ್ಯ ಬರಹ]🤣

* ಕರ್ನಾಟಕದಲ್ಲಿಯ ಬ್ಯಾಂಕು ಅಂದಮೇಲೆ

ಕನ್ನಡದ ಗಂಧ ಗಾಳಿಯೇ ಇಲ್ಲದ ಸಿಬ್ಬಂದಿಗಳು ಅಲ್ಲಿ ಇರಲೇಬೇಕು!.


* ಟಿವಿ ಸುದ್ದಿ

ಅಂದಮೇಲೆ ಸುದ್ದಿಯಲ್ಲಿ ಏನೂ ಇರದಿದ್ದರೂ ಅಲ್ಲಿ “ಬ್ರೇಕಿಂಗ್ ನ್ಯೂಸ್ ” ಎಂತ ಇರಲೇಬೇಕು!


* “ಇಲ್ಲಿ ಮೂತ್ರ ಮಾಡಬೇಡಿ” ಎಂದು ಫಲಕ ಇದೆ ಅಂದಮೇಲೆ

ಅಲ್ಲಿಯೇ ಮೂತ್ರ ವಿಸರ್ಜಿಸುವವರು ಇರಲೇಬೇಕು!


* ಕೇರಿ ಅಂದಮೇಲೆ

ಅಲ್ಲಿ ಖಾಲಿ ಕೊಡಗಳ ಸಾಲು ಇರಲೇಬೇಕು!


* ಇಂದಿನ ಫ್ಯಾಷನ್ ಅಂದಮೇಲೆ

ಮುಚ್ಚ ಬೇಕಾದುದನ್ನು ಮುಚ್ಚದೇ ಪ್ರದರ್ಶಿಸುವವರು ಇರಲೇಬೇಕು!.


* ಊರು ಅಂದಮೇಲೆ

ಬಾರು ಇರಲೇಬೇಕು!.


* ಬಸ್ ನಿಲ್ದಾಣ ಅಂದಮೇಲೆ

ಎಲೆ ಅಡಿಕೆ ಅಗಿಯುತ್ತ ಕೈಗೆ ತಗುಲಿದ ಸುಣ್ಣವನ್ನು ನಿಲ್ದಾಣದ ಗೋಡೆಗೆ ಒರೆಸುವವರು ಇರಲೇಬೇಕು!.


* ಮನೆ ಅಂದಮೇಲೆ

ನಾಯಿ ಇರದಿದ್ದರೂ ಗೇಟಿಗೆ “ನಾಯಿ ಇದೆ ಎಚ್ಚರಿಕೆ” ಬೋರ್ಡು ಇರಲೇಬೇಕು!.


* ಕನ್ನಡ ಪ್ರೇಮಿ ಅಂದಮೇಲೆ

ಅವರ ಮಕ್ಕಳು ಕಾನ್ವೆಂಟಿನಲ್ಲಿ ಇರಲೇಬೇಕು!.


* ಪತ್ರಿಕೆ ಅಂದಮೇಲೆ

ಬೇಡಿ ಓದುವವರು ಇರಲೇಬೇಕು!.


* ಧಾರಾವಾಹಿ ಅಂದಮೇಲೆ

ಕತೆ ಒಳ್ಳೆಯ ತಿರುವುಪಡೆಯುತ್ತಿರುವಾಗ ಅಲ್ಲಿ ಜಾಹೀರಾತು ಇರಲೇಬೇಕು!.


* ಕನ್ನಡ ಸಿನೆಮಾ ಅಂದಮೇಲೆ

ಸಿನೆಮಾದ ಹೆಸರು ಇಂಗ್ಲಿಷಿನಲ್ಲಿ ಇರಲೇಬೇಕು!.













ದೇವಿದಾಸ ಸುವರ್ಣ


27 views0 comments

Opmerkingen


bottom of page