ಇದು ಅಂಕೋಲೆಬಳ್ಳಿ
ಅಲಾಜಿಯಂ ಸಾಲ್ವಿಪೋಲಿಯಂ ಅಲಾಂಜಿಯೇಸಿ.
ಸಂಸ್ಕೃತ: ಶೋಧನಂ,
ಹಿಂದಿ.ಅಕೋಲ
ಇಂಗ್ಲೀಷ್:.ಸೇಜ್ ಲೀವ್ಡ್ ಅಲಾಜಿಯಂ
ಪ್ರದೀಪ ಜಿ.ಹೆಗಡೆ ಬರಗದ್ದೆ ಕುಮಟಾ.
ಪರಿಚಯ.. ಅಂಕೋಲೆಬಳ್ಳಿ ಇದನ್ನು ಬೇಸಿಗೆಯಲ್ಲಿ ಎಲೆಯುದುರುವ ಸಸ್ಯಾವರಣ ಮತ್ತು ಮಲೆನಾಡಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ ಇದು ಪೊದೆ ಜಾತಿಯ ಸಸ್ಯ ಆದರೆ ಕೆಲವೊಮ್ಮೆ ಸಣ್ಣ ಮರವಾಗಿಯೂ ಬೆಳೆಯುತ್ತದೆ.ಮರಕ್ಕೆ ಹಬ್ಬಿಯೂ ಬೆಳೆಯುತ್ತದೆ. ಹಾಗೆ ಗಿಡದ ಗೆಲ್ಲುಗಳಲ್ಲಿ ದೊಡ್ಡ ದೊಡ್ಡ ಮುಳ್ಳುಗಳು ವಿರಳವಾಗಿ ಅಲ್ಲಲ್ಲಿ ಇರುತ್ತದೆ.
ಮುಖ್ಯ ಔಷಧ.. ಹಾವುಕಚ್ಚಿದಾಗ ವಿಷ ಹರಡದಂತೆ ವಿಷ ನಿಧಾನವಾಗಿಸಲು.ಹಾಗೆ ನಾಯಿಕಚ್ಚಿದಾಗ ಅಲ್ಲದೇ ನಾಯಿಯ ಸರ್ವ ರೋಗಕ್ಕೆ
ಇನ್ನಿತರ ಔಷಧಗಳಿಗೂ ಕೂಡ.
೧.ಅಂಕೋಲೆಬಳ್ಳಿಯ ಬೇರನ್ನು ಅಕ್ಕಿತೊಳೆದ ನೀರಿನಲ್ಲಿ ತೇದು ಜೇನುತುಪ್ಪ ಸೇರಿಸಿ ನೆಕ್ಕುವದರಿಂದ ಬೇದಿ ನಿಲ್ಲುತ್ತದೆ
ನಾನು ಮಖ್ಯ ಔಷಧದೊಂದಿಗೆ ಇನ್ನಿತರ ಪೂರಕ ಔಷಧಕ್ಕೆ ಬರುತ್ತದೆ ಎಂದು ತಿಳಿಯ ಪಡಿಸುತ್ತೆನೆ ಅಲ್ಲದೆ ಇಲ್ಲಿ ಹೇಳಿದ್ದು ಔಷಧ ನೆಕ್ಕುವದು, ಕುಡಿಯುವದು ಹೀಗೆ ತಿಳಿಸಿದಂತೆ ಮಾಡಿದರೆ ಹೆಚ್ಚು ಪರಿಣಾಮಕಾರಿ ಇದನ್ನು ನೆನಪಿನಲ್ಲಿಡಿ ಉದಾಹರಣೆಗೆ ಕೆಮ್ಮಿಗೆ ಲಿಂಬುರಸ ಮತ್ತು ಸಕ್ಕರೆ ಸೇರಿಸಿ ಪಾಕ ಮಾಡಿ ಆಗಾಗ ಬೆರಳು ಅದ್ದಿ ನೆಕ್ಕುತ್ತಿದ್ದರೆ ಕೆಮ್ಮಿನ ತೀವೃತೆ ಕಡಿಮೆ ಆಗುತ್ತದೆ ಅದೇ ಕುಡಿದು ಬಿಟ್ಟರೆ ಪರಿಣಾಮ ಆಗದು.
೨.ನಾಯಿಕಚ್ಚಿದಾಗ ಗಾಯವನ್ನು ಸ್ವಚ್ಛವಾಗಿ ತೊಳೆದು ಅದಕ್ಕೆ ಲಿಂಬುರಸದಲ್ಲಿ ಬೇರನ್ನು ತೇದು ಹಚ್ಚಿ ಹಾಗೆ ಅಕ್ಕಿತೊಳೆದನೀರಿನಲ್ಲಿ ೨ ಚಮಚ ಗಂಧ ಆಕಳತುಪ್ಪ ೨ ಚಮಚ ಸೇರಿಸಿ ತಿನ್ನಿಸ ಬೇಕು ಇದರಿಂದ ನಾಯಿ ಕಚ್ಚಿದಾಗ ದೇಹಕ್ಕೆ ಸೇರಿದ ವಿಷ ಇಳಿಯುತ್ತದೆ ನಂತರ ಬೇಕಾದಲ್ಲಿ ವೈದ್ಯಕೀಯ ಸಹಾಯ ಪಡೆಯಬಹುದು.
೩.ಕೀಲು ನೋವಿಗೆ
ಅಂಕೋಲೆಬಳ್ಳಿ ಬೇರು ೪ತೊಲೆ ೧೦೦ ಮಿಲಿ ತೆಂಗಿನ ಎಣ್ಣೆಯಲ್ಲಿ ಕುದಿಸಿ ನೋವಿರುವಲ್ಲಿ ಲೇಪಿಸುತ್ತಿರಬೇಕು
೪.ಕೈಮದ್ದು/ ಮದ್ದು ಬಿದ್ದಿದ್ದಕ್ಕೆ / ಕೃತ್ರಿಮ ವಿಷ
ಇಂತಹ ಆಹಾರ ಅಥವಾ ಕೃತ್ರಿಮ ವಿಷಾಹಾರ
ಸೇವಿಸಿದಾಗ ಬಳ್ಳಿ ಬೇರನ್ನು ಒಣಗಿಸಿ ಚೂರ್ಣ ಮಾಡಿ ಲಿಂಬುರಸಲ್ಲಿ ಮಿಶ್ರಣ ಮಾಡಿ ಸೇವಿಸಿ ಇದನ್ನು ೭ ದಿನ ಬಿಡದೇ ಖಾಲಿ ಹೊಟ್ಟಯಲ್ಲಿ ಸೇವಿಸಿ ಅಥವಾ ೩ ಚಮಚ ಗಂಧ ಲಿಂಬುರಸದಲ್ಲಿ ತೇದು ಕುಡಿಯಿರಿ ಇದರಿಂದ ಪುಡ್ ಪಾಯಿಸನ್ ಉಗುರು ಪ್ರಾಣಿಗಳ ಉಗುರು ಆಹಾರಾದಲ್ಲಿ ಬೆರೆತ ವಿಷ ಲೋಹದ ವಿಷ ಇನ್ನಿತರ ವಿಷ ಪರಿಹಾರ ಆದರೆ ಈ ಸಮಯದಲ್ಲಿ ಕೇವಲ ಮಜ್ಜಿಗೆ ಅನ್ನ ಊಟ ಮಾಡಬೇಕು ಅಂದರೆ ಪಥ್ಯ ಅಗತ್ಯ.
೫.ಅಂಕೋಲೆ ಬಳ್ಳಿಗೆ ಬೀಜವಾಗುತ್ತದೆ ಅದನ್ನು ಒಣಗಿಸಿ ಪುಡಿಮಾಡಿ ಕೆಲವುದಿನ ಸೇವಿಸುವದರಿಂದ ವೀರ್ಯ ವೃದ್ಧಿ ಆಗುತ್ತದೆ
ಇದನ್ನು ಯಾವುದೇ ವಿಧದಲ್ಲೂ ಸೇವಿಸಬಹುದು
೬ ಹಾವು ಕಚ್ಚಿದಾಗ
ಅಂಕೋಲೆಬಳ್ಳಿ ಬೀಜವನ್ನು ಪುಡಿಮಾಡಿ ೨ ತೊಲೆ ಜೇನುತುಪ್ಪದಲ್ಲಿ ಸೇವಿಸಿ ಬೀಜ ಸಿಗದಿದ್ದಲ್ಲಿ ಲಿಂಬುರಸದಲ್ಲಿ ಬೇರು ತೇದು ಉಪಯೋಗಿಸಿ ನಂತರ ವೈದ್ಯಕೀಯ ಸಹಾಯ ಪಡೆಯಿರಿ.
ಯಾವುದೇ ಔಷಧೀಯ ಉಪಯೋಗಕ್ಕಾಗಿ ಬಳ್ಳಿ ಅಥವಾ ಗಿಡ ಕತ್ತರಿಸುವುದಾಗಲಿ ಅಥವಾ ಬೇರು ಕೀಳುವದಾಗಲಿ ಮಾಡುವಾಗ ಗಿಡ ಸಾಯದಂತೆ ಎಚ್ಚರಿ ಅಗತ್ಯ ಮುಂದಿನ ಪೀಳಿಗೆಗೂ ಅಗತ್ಯ.
Comments