top of page

ಅವೈರಾಗ್ಯ

ಹೆಣ ಕಂಡಾಗ

ಎಲ್ಲರ

ನಿಟ್ಟುಸಿರೊಂದೇ;

ಅಯ್ಯೋ

ಜೀವನ

ಇಷ್ಟೆಯೇ!

ಸುಟ್ಟು

ಮರಳಿದ್ದೇ ತಡ,

ಮತ್ತದೇ ಪ್ರಶ್ನೆ;

ಈವರೆಗೆ

ಗಳಿಸಿದ್ದು

ಇಷ್ಟೆಯೇ?


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page