ನಮ್ಮ ಮನೆಯಂಗಳದಿ
ಗಿಡದಲ್ಲೊಂದು
ಗುಬ್ಬಿಗೂಡು
ದಿನನಿತ್ಯ ಚಿಲಿಪಿಲಿ ಹಾಡು
ಅಲ್ಲೇ ಮನೆ
ಸುತ್ತಲೂ ಹಾರಾಟ
ಮೊಟ್ಟೆ ಇದ್ದಿರಬೇಕು ಗೂಡಲಿ
ಅದಕ್ಕೇ ಕಾವಲು ಸರದಿಯಲ್ಲಿ
ಭರ್ರೆಂದು ಹಾರಿ ಬಂತು
ಒಂದು ಗುಂಪು
ಸುತ್ತುಹಾಕಿತು ಅಲ್ಲೆಲ್ಲ
ಅರಿವಾಯಿತು ಅವಕೆ ಅಲ್ಲೇನೂ ಭಯವಿಲ್ಲ
ಕೆಲಸ ಮುಗಿಯಿತು
ಮತ್ತೆ ಹಾರಿತು
ಬಂತು ಇನ್ನೊಂದು ಗುಂಪು
ಚಿಲಿಪಿಲಿ ಕಲರವದ ಇಂಪು
ಚಿಂವ್ --ಚಿಂವ್--ಚಿಂವ್--
ಸದ್ದು ಸದಾ
ಮೊಟ್ಟೆ ಮರಿಯಾಗಬೇಕು
ಅದಕ್ಕಾಗೇ ಹಗಲಿರುಳೂ ಕಾಯಬೇಕು
ಗುಬ್ಬಿ ಸಂತತಿ ಕೆಲವು ಕಡೆ
ನೋಡಲಿಕ್ಕೂ ಇಲ್ಲ
ನಮ್ಮ ಮನೆ ಮುಂದೆ ಮಾತ್ರ
ನೋಡಲಿಕ್ಕುಂಟು ಗುಬ್ಬಿಗಳ
ವಿವಿಧ ಗಾತ್ರ
ವೆಂಕಟೇಶ ಹುಣಶಿಕಟ್ಟಿ
ನಿತ್ಯೋತ್ಸಾಹದ ಕವಿ,ಚಿಂತಕ,ಬರಹಗಾರ,ಸಮಾಜಮುಖಿ ಪ್ರೊ.ವೆಂಕಟೇಶ ಹುಣಶಿಕಟ್ಟಿಯವರು ತಮ್ಮ ಮನೆಯಂಗಳದಲ್ಲಿ ಕಂಡ ಗುಬ್ಬಿ ಗೂಡಿನಿಂದ ಪ್ರೇರಣೆಗೊಂಡು ಬರೆದ ಮಕ್ಕಳ ಕವಿತೆ " ಅಲ್ಲಿತ್ತು ಗುಬ್ಬಿಗೂಡು" ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Komentáře