ಒಡಿದಿರೇ ಒಡಿದಿರೇ ಎಂದು ಒಂದೇ ಸಮನೆ ಕೂಗುತ್ತಾ ಸುಬ್ರಾಯ ತಲೆಯ ಮೇಲಿನ ಭತ್ತದ ಮೂಟೆಯನ್ನು ರಾಮಚಂದ್ರ ಭಟ್ಟರ ಮನೆಯ ಜಗಲಿಯೇ ಬಿರಿವಂತೆ ಧಡ್ ನೆ ತಂದು ಇಡುತ್ತಾನೆ.ಉಸ್ ಏನ್ ಹಾಳಾದ್ದ ಶೆಕೆ
ಎಂದು ಮನಸ್ಸಿನಲ್ಲಿ ಹೇಳುವಷ್ಟುರಲ್ಲೆರಾಮಚಂದ್ರ ಭಟ್ಟರು ಈ ವರ್ಷದ ಗೇಣಿ ಭತ್ತ ಇಷ್ಟೇ ಏನೋ ಹೌದು ಒಡೆಯಾ ಹಂದಿ ಗೊಲೆ ಗದ್ದೆ ತಿಂದು ಏನು ಇಡ್ನೆಲಾ ಮುಂದಿನ ವರ್ಷೆ ನಿಮಗೆ ಗಾನಕೆ ಭತ್ತಾಕೊಡತಿ ರಾಮಚಂದ್ರ ಭಟ್ಟರು ಗೊಣಗುತ್ತ ಆತು ಆತು
ಮುಂದಿನ ವರ್ಷಕ್ಕೆ ಆದರೂ ಒಳ್ಳೆ ಭತ್ತ ಕೊಡು ಮಾರಾಯಾ ಎಂದಾಗ ಸುಬ್ರಾಯ ತನ್ನ ಎರಡು ಕೈಗಳನ್ನು ಕಟ್ಟಿ ಕೊಂಡು ಗೋಣಾಡಿಸುತ್ತ ಆಯ್ತ ಒಡೆಯಾ ಬೀಸುವ ದೊಣ್ಣೆ ತಪ್ಪಿಸಿಕೊಂಡಂತೆ ರಾಮಚಂದ್ರ ಭಟ್ಟರ ಮನೆಯಿಂದ ಕಾಲಕಿತ್ತ. ಸುಬ್ರಾಯನಿಗೆ ಸ್ವಂತ ಜಮೀನಿರಲಿಲ್ಲ. ತಾನು
ಇದ್ದ ಹುಲ್ಲಿನ ಗುಡಿಸಲು ಸಹ ರಾಮಚಂದ್ರ ಭಟ್ಟರ ಪಹಣೆ ಪತ್ರದಲ್ಲಿ ನಮೂದಾಗಿತ್ತು.
ಸುಬ್ರಾಯ ಮತ್ತು ಅವನ ಹೆಂಡತಿರಾಮ ಚಂದ್ರ ಭಟ್ಟರ ಮನೆಯಚಾಕರಿ ಕೆಲಸ ಮಾಡುತ್ತ
ಬದುಕ ಬಂಡಿ ನಡೆಸುತ್ತಿದ್ದರು.ಸುಬ್ರಾಯನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸುತ್ತಾಳೆ. ಸುಬ್ರಾಯನಿಗೆ
ಬಲಗೈ ಮುರಿದಂತೆ ಭಾಸವಾಗುತ್ತದೆ.
ಆದರೂ ಧ್ರತಿಗೆಡುವುದಿಲ್ಲ ಗಂಡು ಮಗುವನ್ನು ಚೆನ್ನಾಗಿ ಪೋಷಣೆ ಯನ್ನು ಮಾಡುತ್ತಾನೆ.ರಾಮಚಂದ್ರ ಭಟ್ಟರು ತನ್ನ ಮಗನ ಹಳೆತಾದ ಅಂಗಿ ಸುಬ್ರಾಯ ನಿಗೆ ಕೊಡುತ್ತಾರೆ .ಸುಬ್ರಾಯ ಆಗ್ಲಿ ಒಡೆಯಾ ಆ ಸಿದ್ದೇಶ್ವರ ಈಚ್ವರದೆವ್ರ ನಿಮಗೆ ಲೈಕ್ ಮಾಡ್ಲಿ.
ಅದೇ ಅಂಗಿ ಹಾಕಿಕೊಂಡ ಸುಬ್ರಾಯ ಮಗ ಏಳನೇ ತರಗತಿವರೆಗೆ ದೂಡುತ್ತಾನೆ
>> ಅಪ್ಪಾ ನಾನು ಮುಂದಿನ ವರ್ಷೆ ಹೈಸ್ಕೂಲ್ ಗೆ ಹೋತಿ ಹರ್ಕ ಅಂಗಿ ಹಾ ಕಂಡೆ ನಾನೇನು ಹೈಸ್ಕೂಲಿಗೆ ಹೋಗು ಕಲಾ ನೀನು ನಂಗೆ ಅಂಗಿ ತೆಗಸಿಕೊಡು ತಿಮ್ಮಣ್ಣ ಒಂದೇ ಸಮನೆ ಹಟ ಹಿಡಿದು ನಿಂತಿದ್ದ. ಮಗನೇ ಇದ ಒಂದು ವರ್ಷೆ ಅದೇ ಅಂಗಿ ಹಾಕ್ಕಂಡೆ ಹೋಗಾ ಮುಂದಿನ ವರ್ಷೆ ಹೊಸ ಅಂಗಿ ಗೋಕರ್ಣದ ಜಾತ್ರೆಲೆ ತೆಗಸ ಕೊಡ್ತಿ. ಸುಬ್ರಾಯನ ಮಾಲಿಷ್ ಮಾತಿಗೆ ತಿಮ್ಮಣ್ಣ ಆಯ್ತ ಅಪ್ಪ ಎಂದ.
>> ಹೈಸ್ಕೂಲ್ ನಲ್ಲಿ ಸಹಪಾಠಿ ಗಳು ತಿಮ್ಮಣ್ಣ ನ ಹರಿದ ಅಂಗಿಯ ಕಂಡು ಗೇಲಿ ಮಾಡಿ ನಗುತ್ತಿದ್ದರು. ಮುಂದಿನ ವರ್ಷೆ ಹೊಸಾತ ಅಂಗಿ ಹಾಕಂಡ ಬತ್ತಿ ಆಗ ನೋಡಿ ನಿಮಗೆ ಏನ್ ಮಾಡ್ತಿ ಅಂದೆ ಸಹಪಾಠಿ ಗಳಿಗೆ ಖಡಕ್ಆಗಿ ಹೇಳುತ್ತಿದ್ದ.
>> ಸುಬ್ರಾಯನಿಗೆ ತಾನುರಾಮಚಂದ್ರ ಭಟ್ಟರ ಮನೆ ಯಲ್ಲಿ ಕೂಲಿನಾಲಿ ಮಾಡದ್ದು ಸಾಕು ತಿಮ್ಮಣ್ಣ
>> ವಿದ್ಯಾವಂತ ನಾಗಿ ಉನ್ನತ ಹುದ್ದೆಗೆ ಏರಬೇಕು ಅವನ ಇರಾದೆಯಾಗಿತ್ತು.ಒಂದು ದಿನ
>> ಸುಬ್ರಾಯ ನಸುಕ್ಕುಗಟ್ಟಿದ ಕಾಲಿನಿಂದ ರಕ್ತ
>> ಒಸರುತ್ತಿತ್ತು.ಅದನ್ನು ಕಂಡ ಮಗ ತಿಮ್ಮಣ್ಣ
>> ಅಪ್ಪ ಒಡೆದಿರ ಮನೆ ಕೆಲಸಬಿಡ್ಕಂಡಿ ಬೇರೆ ಯಾವದಾದ್ರು ಕೆಲಸಾ ನೋಡಾ ಎಟ್ ದಿನೆ ಒಡಿದಿರ ಮನೆಲಿ ಗೇಯತಿ ತಿಮ್ಮಣ್ಣ ಅಪ್ಪನಿಗೆ
>> ಹೇಳಿದಾಗ ನಮ್ಮ ಒಡಿದಿರು ದೆವ್ರ ಅಂತರು.
>> ಅವ್ರ ಮನೆ ಬಿಟ್ಕಂಡಿ ನಾನು ಮತ್ತೆ ಯಾರ ಮನೆಗೂ ಗೇಯುಕೆ ಹೋಗು ಕಲಾ ನಿನ್ನ ಅವೆ ನಿಂಗೆ ಹುಟ್ಟಸಕೊಟ್ಟಿನನ್ನ ಕೈಗೆ ಕೊಟ್ ಕಂಡ್ ಹೋಗಿತು ನಿನ್ನ ನೋಡಕಂಬುದು ನಾನೇ ಮತ್ತೆ ಯಾರೂ ಬರುಕಲಾ ತನ್ನ ಮಾತಿನ ವರಸೆಯಲ್ಲೇ ತಿಮ್ಮಣ್ಣ ನನ್ನು ಸುಬ್ರಾಯ ಗಪ್ ಚುಪ್ ಗೊಳಿಸದನು.
>> ನಮಗೆ ಚ್ವಂತೆ ಒಂದು ಚೂರು ಜಾಗಾನೂ ಇಲ್ಲಾ ಎಲ್ಲಾ ಒಡೆದಿರತೆಯಾ ಅವರೇ ನಮ್ಮ ದೆವ್ರು ಸುಬ್ರಾಯ ರಾಮಚಂದ್ರ ಭಟ್ಟರ ಹಂಗಿನ ಇಕ್ಕಳಿಗೆ ಸಿಕ್ಕಿ ಹೋಗಿದ್ದ.
>> ತಿಮ್ಮಣ್ಣ ಬಡತನ ಬೇಗೆಯಲ್ಲಿಯೇ ಬೆಳೆದುದರಿಂದ ಚೆನ್ನಾಗಿ ಕಲಿಯಬೇಕೆಂಬ
>> ಛಲ ಅವನ ಮನಸ್ಸಿನಲ್ಲಿ ಯೇ ಮೊಳೆತ್ತಿತ್ತು.
>> ತರಗತಿಯಲ್ಲಿ ಎಲ್ಲಾ ವಿಷಯ ಗಳಲ್ಲಿ ಮುಂದಿರುತ್ತಿದ್ದ.ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿ ಯಾಗಿದ್ದ.ಹತ್ತನೆಯ ತರಗತಿಯಲ್ಲಿ ತರಗತಿಗೆ ಪ್ರಥಮನಾಗಿ ತೇರ್ಗಡೆ ಹೊಂದಿದ. ಇವನ ಕುಶಾಗ್ರಮತಿಯನ್ನು ಗಮನಿಸಿದ ಮಹಾದೇವ ಮಾಸ್ತರು ತಿಮ್ಮಣ್ಣನಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚುತ್ತಾರೆ.
>>
>> ಪದವಿ ಯನ್ನು ಉನ್ನತ ದರ್ಜೆಯಲ್ಲೆ ಪಾಸಾಗುತ್ತಾನೆ. ಐ.ಏ ಎಸ್ ಪಾಸು ಮಾಡಿ ದೆಹಲಿಗೆ ತರಬೇತಿಗೆ ಹೋಗುತ್ತಾನೆ.ನನ್ನ ಮಗ ದೊಡ್ಡ ಸಾಯ್ಬ ಆಗ್ಯಾ ಎಂದು ಸುಬ್ರಾಯ ಊರ ಜನರಿಗೆಲ್ಲಾ ಹೇಳುತ್ತಾನೆ.
>> ತನ್ನೆಲ್ಲಾ ನೋವನ್ನು ಮಗನ ಅಭ್ಯುದಯವನ್ನು ಕಂಡು ಮರೆತ.
>> ತಿಮ್ಮಣ್ಣ ದೆಹಲಿಗೆ ಐ.ಏ.ಎಸ್.ತರಬೇತಿಗೆ ಹೋದಾಗ ಒಂದು ಹುಡುಗಿಯ ಪರಿಚಯವಾಗುತ್ತದೆ. ಆ ಪರಿಚಯವೇ ಪ್ರೇಮಕ್ಕೆ ತಿರುಗಿ ಆ ಹುಡುಗಿ ಯನ್ನೇ ತಿಮ್ಮಣ್ಣ ಮದುವೆಯಾಗುತ್ತಾನೆ.
>>
>> ತನ್ನ ಊರಿಗೆ ಹೆಂಡತಿ ಸಮೇತ ಬರುತ್ತಾನೆ.
>> ತಾನು ಬೆಳೆದ ಪರಿಸರ ತಾನು ದೊಡ್ಡ ವನಾದ ಮನೆ ತನ್ನ ಹೆಂಡತಿಗೆ ತೋರಿಸುತ್ತಾನೆ. ಹೆಂಡತಿ ಗೊಳ್ಳೆಂದು ನಗುತ್ತಾಳೆ.ಇಂತಹ ಗುಡಿಸಲು ನಿಮ್ಮ ಮನೆಯಾ? ತಿಮ್ಮಣ್ಣನ ಮೊಗವು ಅರಳಿದ ಹೂವು ಬಾಡಿದ ಹಾಗೆ ಆಗುತ್ತದೆ. ಸುಬ್ರಾಯ ಎಂತಾ ಹುಡುಗಿಯನ್ನು ನನ್ನ ಮಗ ಮದುವೆಯಾಗಿದ್ದಾನೆ ಎಂದು ಮನದಲ್ಲಿಯೇ ನೊಂದುಕೊಳ್ಳುತ್ತಾನೆ.
>>
>> ತಿಮ್ಮಣ್ಣ ಅಪ್ಪ ಹೇಗಿದ್ದಿಯಾ ?ಎಂದು ಕೇಳುತ್ತಾನೆ. ನಾಂದ ಏನ್ ಮಗಾ ನಾನು ಒಣ ಮರ ಇವತಲ್ಲಾ ನಾಳೆ ಬಿದ್ದಹೋಗೋನೂ ನೀನ ಹಚಿ ಮರ ನೂರು ವರ್ಚೆ ಚಾಂದಾಗಿ ಬದುಕು.ನೀ ಬತ್ತಿ ಹೇಳಿ ಅಕ್ಕಿ ದೋಶಿ ಮಾಡಿ
>> ಚಾ ನೂ ಮಾಡಿ ತಿಮ್ಮಣ್ಣ ನ ಹೆಂಡತಿ ನಮಗೆ ದೋಸೆ ಚಾ ಬೇಡ ಕಡ್ಡಿ ಮುರಿದವಳಂತೆ ಮಾತನಾಡುತ್ತಾಳೆ. ನಾವು ಇಲ್ಲಿ ಇರೋದು ಬೇಡ ನಾವು ದೆಹಲಿಗೆ ಹೋಗೋಣ. ತಿಮ್ಮಣ್ಣ ನ ಕೈ ಹಿಡಿದುಕೊಂಡು ಮನೆಯ ಹೊರಕ್ಕೆ ಬರುತ್ತಾಳೆ.
>> ಸುಬ್ರಾಯ ನಿಮು ಇಬ್ಬರು ಚಲೋ ಮಾಡ್ಕಂಡಿ ಇರಿ. ಎಂದು ಸುಬ್ರಾಯ ತಿಮ್ಮಣ್ಣ ನಿಗೆ ಹರಿಸುತ್ತಾನೆ.
>>
ಕೆಲವು ದಿನ ಕಳೆದ ಮೇಲೆ ಸುಬ್ರಾಯ ಅಸ್ವಸ್ತನಾಗುತ್ತಾನೆ. ಊರ ಮಂದಿ ತಿಮ್ಮಣ್ಣ ನಿಗೆ ಸುದ್ದಿ ಮುಟ್ಟಿಸುತ್ತಾರೆ. ತಿಮ್ಮಣ್ಣ ತಂದೆ ಯನ್ನು ಕಾಣಲು ಊರಿಗೆ ಬರುತ್ತಾನೆ.
ಸುಬ್ರಾಯ ಮನೆಯ ಎದುರಿನಲ್ಲಿ ಊರಿನ ಜನರೆಲ್ಲಾ ನೆರೆದಿದ್ದರು. ಸುಬ್ರಾಯ ಮಂಚದ ಮೇಲೆ ಗಾಢ ನಿದ್ರೆಗೆ ಜಾರಿದ್ದ.ಆಪ್ಪಾ ಆಪ್ಪಾ ನಾ ಬಂದಿ ನಿನ್ನ ತಿಮ್ಮಾ ಏಳಾ ಸುಬ್ರಾಯನ
ಕೈ ತಣ್ಣಗಾಗಿತ್ತು. ತಿಮ್ಮಣ್ಣ ಅಪ್ಪನ ಕೈ ಕಾಲು
ಉಜ್ಜ ತೊಡಗಿದ ಈಡೀ ದೇಹವೇ ತಣ್ಣಗಾಗ
ತೊಡಗಿತು.ಗರ್ ಎಂದು ಸುಬ್ರಾಯನ ತನ್ನ ಬದುಕಿನ ಆಟ ಮುಗಿಸಿದ.
ಸುಬ್ರಾಯ ತಿಮ್ಮಣ್ಣ ನಿಗಾಗಿ ತನ್ನ ಈಡಿ ಬದುಕೇ ಗಂಧದ ಕೊರಡಿನಂತೆ ತೇದಿದ್ದ.
ಆಪ್ಪಾ ಆಪ್ಪಾ ನನ್ನ ಬಿಡ್ಕಂಡಿ ಹೊದೆ ನೀನು
ಭಟ್ರ ಮನೆಲಿ ಗೇದಕ ಬಂದಿ ಏಟ್ ಲೈಕ್ ಮಾಡಿ ನಂಗೆ ಶಾಕಿ.ಒಂದೇ ಸಮನೆ ತಿಮ್ಮಣ್ಣ ನೆಲದಲ್ಲಿ ಹೊರಳಾಡದ
ಸುಬ್ರಾಯನ ಅಂತ್ಯ ಸಂಸ್ಕಾರ ಮುಗಿಸಿಕೊಂಡು ತಿಮ್ಮಣ್ಣ ಮನೆಗೆ ಬರುತ್ತಾನೆ. ಮನೆಯಲ್ಲಿದ್ದ ಕಪಾಟಿನ ಬಾಗಿಲು
ತೆಗೆಯುತ್ತಾನೆ.ತಾನು ಚಿಕ್ಕವನಿದ್ದಾಗ ಗೋಕರ್ಣದ ಜಾತ್ರೆಯಲ್ಲಿ ಅಪ್ಪ ಕೊಡಸಿದ ಅಂಗಿಯನ್ನು ಕಂಡು ಕಣ್ಣೀರಿಡುತ್ತಾನೆ. ಅಂಗಿಯನ್ನು ತನ್ನ ಎದೆಗೆ ಅಮುಕಿಕೊಳ್ಳುತ್ತಾನೆ.ಆ ಅಂಗಿಯಲ್ಲೇ ಅಪ್ಪ ನ ಪ್ರತಿಬಿಂಬಿ ಕಾಣುತ್ತಾನೆ.
__________________________________
ಅನಿಲ ಕಾಮತ
ಮೊಕ್ಕಾಂ. ಸಿದ್ದೇಶ್ವರ
top of page
bottom of page
Comentários