ಅನಿರೀಕ್ಷಿತ
- ಆಲೋಚನೆ
- Jul 22, 2021
- 1 min read
ಹೋದ
ಹೋದನವ
ಮೇಲೆ
ಹೋದ
ಆಸೆ-ಆಕಾಂಕ್ಷೆ
ಎಲ್ಲ ಕಟ್ಟಿಟ್ಟು
ಇಲ್ಲೇ
ಹೋದ
ಬರಿಗೈಲಿ
ಲಕ್ಷ ಗಳಿಕೆ
ಕೋಟಿ ಗಳಿಕೆ
ಲೆಕ್ಕ ಸಿಗದಷ್ಟು
ಮತ್ತೆ
ದಕ್ಕಲಿಲ್ಲ
ಸಾಯುವಾಗ
ಜೀವ
ಉಳಿಸಲಿಲ್ಲ
ಕೊರೋನಾ ಕೆಂಗಣ್ಣು
ಬಿದ್ದೇಬಿಟ್ಟಿತು
ಸದ್ದಿಲ್ಲದೆ
ವಕ್ಕರಿಸಿತು
ನರಳಿತು ಜೀವ
ಹಂಬಲಿಸಿತು
ಬಂಧು-ಬಾಂಧವರಿಗಾಗಿ
ಬರಲಿಲ್ಲ
ಯಾರೂ
ಆಸೆ ಮಣ್ಣಾಯ್ತು
ಭರವಸೆ ಬೂದಿಯಾಯ್ತು
**""**""****
*ಪ್ರೊ.ವೆಂಕಟೇಶ ಹುಣಶೀಕಟ್ಟಿ
Comments