top of page

ಅಕ್ಟೋಬರ್ 5 ಡಾ. ಕೆ. ರಘುರಾಮ ವಾಜಪೇಯಿರವರಿಗೆ `ಗಾಂಧಿಸ್ಮೃತಿ’ ಪ್ರಶಸ್ತಿ ಪ್ರದಾನ

ಮಹಾತ್ಮ ಗಾಂಧೀಜಿ 150ನೇ ಜಯಂತಿ ಸಮಾರೋಪದ ಅಂಗವಾಗಿ ಮೈಸೂರಿನ ಹಿರಿಯ ಸಮಾಜಸೇವಾ ಧುರೀಣ – ಗಾಂಧಿವಾದಿ ಡಾ. ಕೆ. ರಘುರಾಮ ವಾಜಪೇಯಿರವರಿಗೆ ಬೆಂಗಳೂರಿನ ಅಮರ ಬಾಪು ಚಿಂತನ ಪತ್ರಿಕೆಯ ವತಿಯಿಂದ ಇದೇ ಅಕ್ಟೋಬರ್ 5 ಸೋಮವಾರ ಬೆಳಿಗ್ಗೆ 10.30ಕ್ಕೆ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗಾಂಧಿ ಸ್ಮøತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದೆ.


ಗಾಂಧಿ ತತ್ವ ಚಿಂತನೆಗಳ ಪ್ರಸರಣಕ್ಕಾಗಿ ಕಳೆದ 8 ವರ್ಷಗಳಿಂದ ದ್ವಿಭಾಷಾ – ದ್ವೈಮಾಸಿಕವಾಗಿ ಹೊರಬರುತ್ತಿರುವ ಅಮರ ಬಾಪು ಚಿಂತನ ಪತ್ರಿಕೆಯು ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದೊಡನೆ ಈ ಸಮಾರಂಭವನ್ನು ಏರ್ಪಡಿಸಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇರ್ಶಕರಾದ ಹೆಚ್. ಚೆನ್ನಪ್ಪ, ಡಿ.ಟಿ.ಎಸ್ ಫೌಂಡೇಶನ್ ಸಂಸ್ಥಾಪಕ ಡಿ.ಟಿ. ಪ್ರಕಾಶ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೇರೆ ಗೋಪಾಲ್ ಭಾಗವಹಿಸುವರು. ಅಮರ ಬಾಪು ಚಿಂತನದ ಉಪಸಂಪಾದಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಉಪಸ್ಥಿತರಿರುವರು ಎಂದು ಸಂಪಾದಕ ಜೀರಿಗೆ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..


ವಿವರಗಳಿಗೆ 97393 69621


ಈ ಕಾರ್ಯಕ್ರಮಕ್ಕೆ ತಮ್ಮ ಪತ್ರಿಕೆ/ವಾಹಿನಿಯ ಛಾಯಾಚಿತ್ರಕಾರರು ಮತ್ತು ವರದಿಗಾರರನ್ನು ಕಳುಹಿಸಲು ಹಾಗೂ ಕಾರ್ಯಕ್ರಮದ ಪೂರ್ವಭಾವಿ ಪ್ರಚಾರವನ್ನು ನೀಡಲು ಕೋರಿದೆ.


‘ಗಾಂಧಿಸ್ಮೃತಿ’ ಪ್ರಶಸ್ತಿ ಪುರಸ್ಕøತ ಡಾ. ಕೆ. ರಘುರಾಮ ವಾಜಪೇಯಿ ಕಿರು ಪರಿಚಯ



ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ವಲಯದಲ್ಲಿ ಮೈಸೂರಿನ ಜನತೆಗೆ ಚಿರಪರಿಚಿತರಾದ ಶ್ರೀಯುತರು ವೃತ್ತಿಯಿಂದ ಸುಪ್ರಸಿದ್ಧ ತಾತಯ್ಯ ಅನಾಥಾಲಯದಲ್ಲಿ ವ್ಯವಸ್ಥಾಪಕರಾಗಿ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮೈಸೂರು ಜಿಲ್ಲಾ ಸಭಾಪತಿಗಳಾಗಿ, ಹಾಲಿ ರಾಜ್ಯ ಉಪಾಧ್ಯಕ್ಷರಾಗಿ ಬಡ ವಿದ್ಯಾರ್ಥಿಗಳಿಗೆ ಅನೇಕ ವಿಧವಾಗಿ ನೆರವನ್ನು ನೀಡಿದ್ದಾರೆ, ಮೈಸೂರಿನಲ್ಲಿ ವಿವಿಧ ಯತಿಗಳ ಚಾರ್ತುಮಾಸ್ಯ ಸ್ವಾಗತ ಸಮಿತಿಯ ಪದಾಧಿಕಾರಿಯಾಗಿ, ಗರುಡಚಯನ ಮಹಾಯಾಗದ ಮುಖ್ಯ ಪ್ರವರ್ತಕರಾಗಿ, ಪ್ರಸ್ತುತ ಶ್ರೀ ವಿಶ್ವೇಶ್ವರಯ್ಯ ಗೃಹ ನಿರ್ಮಾಣ ಸಹಕಾರ ಸಂಘ, ಶ್ರೀ ರಾಜರಾಜೇಶ್ವರಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಘುರಾಮ ವಾಜಪೇಯಿರವರು ನಗುಮೊಗದ ತರುಣರಂತೆ ಕ್ರಿಯಾಶೀಲರು.

ಇವರ ಸೇವಾ ತತ್ಪರತೆಯನ್ನು ಗುರುತಿಸಿ ಅನೇಕ ಮಠ-ಮಾನ್ಯಗಳು, ಸಂಘ- ಸಂಸ್ಥೆಗಳು ಧರ್ಮರತ್ನ, ಸಹಕಾರಿ ರತ್ನ, ಮೈಸೂರು ಮಾಣಿಕ್ಯ, ಮೈಸೂರು ಜಿಲ್ಲಾ ಆಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸರ್ ಎಂ.ವಿ. ಪ್ರಶಸ್ತಿ, ವ್ಯಾಸರಾಜಶ್ರೀ ಪ್ರಶಸ್ತಿ, ಜಿ.ವಿ.ಎ.ಪಿ ಯಿಂದ ಗೌರವ ಡಾಕ್ಟರೇಟ್ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಸಹೃದಯ ಸಂಪನ್ನ - ಸಮಾಜಸೇವಾ ಧುರೀಣ, ಆದರ್ಶ ನಡೆನುಡಿಯಿಂದ ಗಾಂಧಿ ತತ್ವ ಅನುಯಾಯಿಗಳಾದ ಶ್ರೀಯುತರ ಮುಡಿಗೆ ಇದೀಗ ಗಾಂಧಿ ಸ್ಮೃತಿ ಪ್ರಶಸ್ತಿಯ ಗರಿ.


ವಂದನೆಗಳು

ಇಂತಿ ತಮ್ಮ ವಿಶ್ವಾಸಿ,


ಜೀರಿಗೆ ಲೋಕೇಶ್

ಸಂಪಾದಕರು

ಅಮರ ಬಾಪು ಚಿಂತನ

16 views0 comments

Comments


bottom of page