'ನಾನು'ಗಳ ಮಧ್ಯ ನೀನು.*
ಸುತ್ತ,ಮುತ್ತ,ಒಳಗೆ,ಹೊರಗೆ ಗಿರಕಿ ಹೊಡೆಯುವ ತರಹೆವಾರಿ ಬಣ್ಣ,ಬಣ್ಣದ ನಾನುಗಳ ನಡುವೆ ಬಂದಿಯಾಗಿ ಒದ್ದಾಡುತ್ತಿರುವೆ ನೀ.... ಹಗಲಲ್ಲೂ ರಾತ್ರಿ, ಎಚ್ಚರದಲ್ಲೂ ನಿದ್ದೆ, ಮಾತಿನಲ್ಲೂ ಮೌನ, ಅಬ್ಬಾ,,ಎಷ್ಟೆಲ್ಲ ಕಸಿವಿಸಿ ನರಳಾಟ ಪ್ರತಿಕ಼ಣ ನನಸ ನಿರಾಳತೆಯಲ್ಲೂ ಕನಸ ಗುಲಾಮಗಿರಿ, ಯಾವಾಗಲಾದರೊಮ್ಮೆ ನಾನುಗಳೆಲ್ಲ ಸೇರಿ ಸಾರಾ ಸಗಟು ಅಂಗಾತ ಮಲಗಿಸಿ ನಿನ್ನ ಕಚ,ಪಚ ಅರಲು ತುಳಿದಂತೆ ತುಳಿದು ನಿನ್ನ ಹದಗೊಳಿಸುವ ನೆವ ಮಣ್ಣಲ್ಲಿ ಮಣ್ಣಾಗಿಸಿ ಇಲ್ಲವಾಗಿಸುವ ಹುನ್ನಾರಕ್ಕೆ ಬಲಿಯಾಗದಿರು ಜೋಕೆ..!! ಮೊದಲೇ ಬಾಗಿಲು ಮುಚ್ಚಿ ಅಗಳಿಹಾಕಿದ್ದರೂ ಹೆದರದೇ ಪೂರ್ವಾರ್ಜಿತ ಶಕ್ತಿಸಂಚಯ ವನೆಲ್ಲ ಒಗ್ಗೂಡಿಸಿ ಬಾಗಿಲ ಮುರಿದು, ಕದ ಒಡೆದು ಹೊರಗೆ ಬಂದು ಬಿಡು ತ್ವರಿತವಾಗಿ,- ಆಲಯದ ಬೆಳಕ ಬ್ರಮೆ ಯಿಂದ ಬಯಲ ನಿಜ ಬೆಳಕಿಗೆ ಯಾರ ಹಂಗೂ ಇಲ್ಲದ ಸ್ವಚ್ಛಂಧ,ಬಂಧಮುಕ್ತ ಬದುಕೋ,,ಕವಿತೆಯೋ.. ಕಥೆಯೋ...ಏನೋ ಒಂದು ಆಗಲೇ ಬೇಕಿದೆ,ಸಧ್ಯ 'ನಾನು'ಗಳ ನಡುವೆ.. ಸಿಲುಕಿರುವ 'ನೀನು'. --ಅಬ್ಳಿ,ಹೆಗಡೆ.