top of page
ದಾರಿ
ದಾರಿ ಯಾವುದಯ್ಯಾ ವೈಕುಂಠಕೆ... ದಾಸರ ಪದವನಾಲಿಸದವವರಾರು ? ಇಹದಲ್ಲಿ ಬದುಕಿ ಪರದಲ್ಲಿ ದಾರಿ ಹುಡುಕುವ ಪರಿಗೆ ಮನಸೋಲದವವರಾರು ? ಬಹಿರಂಗದ ಹೆದ್ದಾರಿಯಿಂದ ಅತಂರಂಗದ ಕಾಲುದಾರಿಯಲಿ ಇಳಿದು ನಡೆಯಬೇಕು ದಾರಿ ಹೊರಗೆ ಹುಡುಕುವಂತದ್ದಲ್ಲ ಒಳಗೆ ಇಣುಕುವಂತದ್ದು ಕೃಷ್ಣನ ಗೀತೋಪದೇಶದ ಭಕ್ತಿ ಮಾರ್ಗವೋ ಕರ್ಮ ಮಾರ್ಗವೋ ಎಂಬ ದ್ವಂದ್ವದಿಂದಾಚೆಗೆ ಹೊರಳಿ ಹಿಮ್ಮುಖವಾಗಿ ಪಯಣಿಸಬೇಕು ನಮ್ಮದೇ ಬದುಕಿನಲಿ ಸಿಹಿ - ಕಹಿಗಳ ನೆನಪುಗಳ ಮಳೆಯಲಿ ತೋಯತ್ತ ತಪ್ಪು -ಒಪ್ಪುಗಳ ನಿಲ್ದಾಣದಲಿ ನಿಂತು ಒಂದರಘಳಿಗೆ ವಿಶ್ರಮಿಸುತ್ತ ವಿಮರ್ಶಿಸುತ್ತ ನಮಗೆ ನಾವೇ ಸಮಜಾಯಿಷಿ ಕೊಟ್ಟು ಕೊಳ್ಳುತ್ತ ಆದದ್ದೆಲ್ಲಾ ಒಳ್ಳೆಯದಕ್ಕೇ ಎಂಬ ವೇದಾಂತದ ಸಮಂಜಸದ ಮಾತನ್ನು ಮತ್ತೆ ಪುನರುಕ್ತಿಸುತ್ತ ಸಮಾಧಾನಗೊಳ್ಳುತ್ತ ಸಾಗುತ್ತಿರಬೇಕು ಬಹಿರಂಗದ ಒತ್ತಡದ ಬದುಕ ದಾರಿಯ ಬಲವಂತದ ಬಿಡುವಿನಲ್ಲೊಮ್ಮೊಮ್ಮೆ
ಶಾಂತಲಾ ರಾಜಗೋಪಾಲ್
ಬೆಂಗಳೂರು
bottom of page