top of page

ತೃತೀಯ ಲಿಂಗಿಗಳ ಕುರಿತಾಗಿ.....

ನಾನು..ಅವನಲ್ಲ...ಅವಳು. ******** ಗಂಡಾಗಿ ಹುಟ್ಟಿದ ಆತನಲ್ಲೂ, ಅದೇನೋ ತುಡಿತ! ಹೆಣ್ಣಾಗುವ ಅದಮ್ಯ ಆಸೆ! ಅನುಬಂಧ... ಅನುಕೂಲಗಳ ತಳ್ಳಿ, ಬೇರೇನನ್ನೋ ಪಡೆಯುವ ತೀರದ ಹಂಬಲ!! ಮನಸ್ಸು ಬುದ್ಧಿಯ ತಾಕಲಾಟದೇ , ಶರೀರದ ಅಂತಃಸ್ರಾವ ಗಳೇ, ಮೇಲುಗೈ ಪಡೆದು ಬದಲಾಯಿಸಿದವು, ಬದುಕಿನ ಪಥವನ್ನು!! ಹೋರಾಟದ ಹಾದಿ!! ನೋವು ಅಸಹನೆ ಅಳು! ಕುಹಕ ನೋಟ ದುರ್ವರ್ತನೆ! ತಿರಸ್ಕೃತ ಬದುಕು!! ಬೇಡಿ ಪಡೆವುದೆ ಕಾಯಕ! ಬೇಕಾಗಿಲ್ಲ... ಬೇಡವೆಂದರೆ ?? ಹೊಟ್ಟೆಗಿಲ್ಲ ಹಿಟ್ಟು !! ತನ್ನಾಸೆಯಂತೆ ಜೀವಿಸಲು ನೂರಾರು ಅಡಚಣೆ! ಅಡ್ಡಿ - ಆತಂಕಗಳು! ಸಾವಿರದೇ ಒಬ್ಬನಿರಬಹುದು! ಛಲ ಬಿಡದ ಸಾಧಕ!!! ಅಲ್ಲ.....ಅಲ್ಲ.... ಸಾಧಕಿ ನೀನು!! ಉಳಿದವರ ಪಾಡೇನು !! ಸತ್ಯ ದರ್ಶನವಾಯ್ತು! ಸಮಾಜ ಕಂಟಕರಲ್ಲ ! ಸತ್ಯ - ಗೌರವ ಅರಿತ ರೀತಿ - ರಿವಾಜು ಇರುವ! ಮಾತೆಯ ಮಕ್ಕಳು!!! ಗೋಳಾಡಿಸಬೇಡಿ... ಹೃದಯವಂತಿಕೆ ಇರಲು ಕಾಸು ನೀಡಿ ಮುಂದೆ ಸಾಗಿ! ಮಾನವೀಯತೆ ಮೆರೆದು ಬದುಕಿ! ನಿಮ್ಮಂತೆ ಬದುಕಲು ಬಿಡಿ, ಅವರನ್ನೂ.............! ಚಪ್ಪಾಳೆ ತಟ್ಟಿ ನಗುತ ಹಣ ಇತ್ತವರ ಹಾರೈಸುತ! ಮುಂದೆ ಸಾಗಿದವರ ಹಿಂದೊಂದು ಮನಮುಟ್ಟಿದ - ಹೃದಯ ತಟ್ಟಿದ! ಕರುಣಾಜನಕ ಕತೆಯಿದೆ !! ಬದುಕಲು ಹಕ್ಕಿದೆ..... ಈ ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವಿಗೂ........!!!! ( ಶರೀರದ ಅಂತಃಸ್ರಾವ= ಹಾರ್ಮೋನುಗಳು) ಸಾವಿತ್ರಿ ಶಾಸ್ತ್ರಿ, ಶಿರಸಿ ಉತ್ತರಕನ್ನಡ ಜಿಲ್ಲೆ.

ತೃತೀಯ ಲಿಂಗಿಗಳ ಕುರಿತಾಗಿ.....
bottom of page