ತುಂಬೆಗಿಡ.
ಲ್ಯುಕಾಸ್ ಆಸ್ಪೆರ ಲ್ಯಾಮಿಯೇಸಿ ಸಂಸ್ಕೃತ..ದ್ರೋಣಪುಷ್ಪಿ ಹಿಂದಿ.. ಚೋಟಾ ಹಾಲ್ ಕುಶ್ ಇಂಗ್ಲಿಷ್..ವೈಟ್ ಹೆಡ್ ನೆಟಲ್ ಪರಿಚಯ.. ತುಂಬೆಗಿಡ ಒಂದು ಕಳೆಗಿಡವಾಗಿದ್ದು ಗದ್ದೆಯ ಬದುಗಳಲ್ಲಿ , ಕೊಯ್ಲು ಆದ ನಂತರ ಹುಟ್ಟುತ್ತದೆ ಇದನ್ನು ನಾವು ಎಲ್ಲೆಡೆ ನೋಡಬಹುದು, ಬಿಳಿಯ ಸಣ್ಣ ಹೂ ಶಿವನಿಗೆ ಪ್ರಿಯವಾದದ್ದು.ಇದು ಏಕ ವಾರ್ಷಿಕ ಮೂಲಿಕೆ. ೧.ಜಂತು ನಿವಾರಣೆ. ತುಂಬೆ ಬೇರು ೨೫ ಗ್ರಾಂ ನಷ್ಟು ಜಜ್ಜಿ ಕಡೆದ ಮಜ್ಜಿಗೆಯಲ್ಲಿ ಬೆಳಿಗ್ಗೆ ಕುಡಿಯಿರಿ. ಅಥವಾ ತುಂಬೆ ಎಲೆ ರಸ ಮತ್ತು ಲಿಂಬೆರಸ ಕೂಡಾ ಇದಕ್ಕಾಗಿ ಬಳಸಬಹುದು. ೨,ಅರ್ಧ ತಲೆನೋವು( ಮೈಗ್ರೇನ್) ತುಂಬೆ ಎಲೆ+ ಬೆಳ್ಳುಳ್ಳಿ ಸಮ ಪ್ರಮಾಣದಲ್ಲಿ ಸೇರಿಸಿ ಜಜ್ಜಿ ಸ್ವಛ್ಚ ತಿಳುವಾದ ಬಟ್ಟೆಯಲ್ಲಿ ಹಾಕಿ ಹಿಂಡಿ ರಸ ತೆಗೆಯಿರಿ ಮತ್ತು ಎಡಬದಿಗೆ ನೋವಿದ್ದರೆ ಬಲ ಕಿವಿಗೆ/ ಬಲ ಬದಿಯ ನೋವಿಗೆ ಎಡ ಕಿವಿಗೆ ರಸ ಹಾಕಿ ೪ ಹನಿ ರಸ ಸಾಕು ಅಥವಾ ತುಂಬೆ ಹೂವಿನ ರಸ ತೆಗೆದು ೨ ಮೂಗಿನ ಹೊಳ್ಳೆಗೆ ೩/೪ ಹನಿ ರಸ ಹಾಕಿದರೆ ಸಾಕು. ೩.ಚಳಿ ಜ್ವರ ಜ್ವರ ಈಗಿನ ಜ್ವರ ವಿಚಿತ್ರ ಮತ್ತು ವಿಭಿನ್ನ ಹಾಗಾಗಿ ಇದು ಎಷ್ಟು ಪ್ರಯೋಜನ ಹೇಳೋದು ಕಷ್ಟ. ತುಂಬೆ ಸೊಪ್ಪು೧ ಭಾಗ ಇದರ ಕಾಲು ಭಾಗ ಮೆಣಸಿನ ಕಾಳು ಸೇರಿಸಿ ನೀರು ಹಾಕದೇ ಅರೆದು ಕಡಲೆ ಗಾತ್ರದ ಗುಳಿಗೆ ಮಾಡಿ ಹೊತ್ತಿಗೆ ಒಂದರಂತೆ ಸೇವಿಸಿ. ೪, ಸಾಮಾನ್ಯ ಜ್ವರ ತುಂಬೆರಸ ೧ ಚಮಚ+ ತುಳಸಿ ರಸ ೨ಚಮಚ ಮತ್ತು ೨ ಕಾಳುಮೆಣಸಿನ ಪುಡಿ+ ೧ ಚಮಚ ಜೇನುತುಪ್ಪ ಇವನ್ನು ಸರಿಯಾಗಿ ಮಿಶ್ರಣ ಮಾಡಿ ೩ ಹೊತ್ತು ಸೇವಿಸಿ. ೫, ಮೂಲವ್ಯಾಧಿ ಇದು ದೇಹದ ಪ್ರಕೃತಿಗೆ ಅನುಸಾರ ಮಾಡಿ ಕೆಲವರಿಗೆ ಪ್ರಯೋಜನ ಇನ್ನುಕೆಲವರಿಗೆ ಆಗದೇ ಇರಬಹುದು ಅಂತವರು ೨ ದಿನ ಸೇವಿಸಿ ಬಿಟ್ಟು ಬಿಡಿ ತುಂಬೆ ಗಿಡದ ರಸಕ್ಕೆ ಸುಣ್ಣದ ತಿಳಿನೀರು ಸೇರಿಸಿ ಅರೆದು ಹಾಗೇ ಇಡಿ ಅದು ತಿಳಿಯಾದ ಮೇಲೆ ೨ ಚಮಚ ೨ ಹೊತ್ತು ೨೧ ದಿನ ಸೇವಿಸಿ ನಿಮ್ಮ ನಿಮ್ಮ ದೇಹದ ಪ್ರಕೃತಿಗೆ ಹೊಂದುವುದೇ ಪರೀಕ್ಷೆ ಮಾಡಿಕೊಂಡು ಔಷಧ ಮುಂದುವರಿಸಿ. ೬,ಅಜೀರ್ಣ ತುಂಬೆ ಎಲೆ ೨೧ ತೆಗೆದುಕೊಂಡು ಬಾಳೆ ಎಲೆಯಲ್ಲಿ ಸುತ್ತಿ ಬಿಸಿ ಬೂದಿಯಲ್ಲಿ ಹುಗಿದು ಬೆಂದ ಮೇಲೆ ಅದಕ್ಕೆ ಚಿಟಿಕೆ ಸೈಂಧವ ಲವಣ ಸೇರಿಸಿ ತಿನ್ನಿ ಇದರಿಂದ ಅಜೀರ್ಣ ತೊಂದರೆ ನಿವಾರಣೆ ಖಚಿತ . ೭,ಸಂಧಿವಾತಕ್ಕೆ ೧ ತುಂಬೆ ಗಿಡ ಜಜ್ಜಿ ೪ ಲೋಟ ನೀರು ಹಾಕಿ ಕುದಿಸಿ ೧ ಲೋಟಕ್ಕೆ ಇಳಿಸಿ ಇದಕ್ಕೆ ಇಪ್ಪಲಿ ಚೂರ್ಣ ೧/೨ ಗ್ರಾಂ ಸೇರಿಸಿ + ಜೇನುತುಪ್ಪ ಸೇರಿಸಿ ಸೇವಿಸಿ ೨ ಹೊತ್ತು ೧೫ ದಿನ ಸೇವಿಸ ಬೇಕು. ೮, ಹಾವಿನ ಕಡಿತಕ್ಕೆ ಬಾಳೆದಿಂಡಿನ ರಸದಲ್ಲಿ ೧೧ ತುಂಬೆ ಎಲೆ ಅರೆದು ಅದೇ ನೀರು ಸೇರಿಸಿ ಕುಡಿಯಿರಿ ಇದು ಬೇಗನೆ ವಿಷ ಏರದಂತೆ ಮಾಡುತ್ತದೆ. ಆದರೆ ಮುಂದಿನ ಚಿಕಿತ್ಸೆಗೆ ತಜ್ಞರ ಸಲಹೆ ಪಡೆಯಿರಿ. ಪಶುಗಳ ಚಿಕಿತ್ಸೆ ಉಣ್ಣೆ ತುಂಬೆ ಎಲೆ ಸ್ವಲ್ಪ ಉಪ್ಪು ಸೇರಿಸಿ ಅರೆದು ಹಚ್ಚಿ ಮೈ ನೆಕ್ಕಿಕೊಂಡರೂ ಅಪಾಯಕಾರಿ ಅಲ್ಲ ಹಾಗಾಗಿ ಉಣ್ಣೆ ಉಪಟಳಕ್ಕೆ ಮಾಡಿ ನೋಡಿ ಪ್ರದೀಪ ಜಿ.ಹೆಗಡೆ ಬರಗದ್ದೆ ಕುಮಟಾ.