ತಾಯಿ ಸಾವಿತ್ರಿ
ಕ್ರಾಂತಿಯ ಜ್ಯೋತಿ ಬೆಳಗಿದ ತಾಯಿ ಸಾವಿತ್ರಮ್ಮಗೆ ಜಯಕಾರ.. ತಾಯಿ ಸಾವಿತ್ರಮ್ಮಗೆ ಜಯಕಾರ.. ಸಾತಾರಾ ಜಿಲ್ಲೆಯ ನಾಯಗಾಂವ ಗ್ರಾಮದಲಿ ಜನಸಿದ ಅಮ್ಮಾ ಜ್ಯೋತಿಬಾ ಜೊತೆಯಲಿ ಜ್ಯೋತಿಯ ಬೆಳೆಗಲು ಬಂದಳು ಪುಣೆಯಲಿ ಅಮ್ಮಾ. ಪತಿಯ ಕನಸು ನನ್ನ ಕನಸು ಅಬಲೆಯು ಸಬಲೆ ಆಗಲೇಬೇಕು ಜ್ಞಾನವು ಆಕೆಗೆ ಕೊಡಲೇಬೇಕು ಎನುತಾ ಕಲಿತಳು ಅಕ್ಷರಮಾಲೆ ಹೊರಟಳು ಜೊತೆಯಲಿ ಕಲಿಸಲು ಶಾಲೆ. ಉಡುಗು ಮುಸುರಿ ಕೊಳೆಯ ಕೆಲಸ ಪತಿಯ ಮಕ್ಕಳ ಸೇವೆಗಿಂತ ಓದು ಬಹಳ ಮುಖ್ಯ ಸ್ವಾಭಿಮಾನದ ಬದುಕಿಗಾಗಿ ಓದು ಬಹಳ ಮುಖ್ಯ ಎನ್ನುತಾ ಕರೆದಳು ಶಾಲೆಯಲಿ.. ನಡೆದಳು ತಾನು ಜೊತೆಯಲ್ಲಿ.. ತಾಯಿ ಮಾತು ಕೇಳುತಲಿ ನಡೆದಳು ಹೆಣ್ಣು ಶಾಲೆಯಲಿ ಕ್ರಾಂತಿಯ ಕಾರ್ಯ ನೋಡುತಲಿ ನೀಚರು ಬಂದರು ದಾರಿಯಲಿ ಒಗೆದರು ಸೆಗಣಿ, ಎಸೆದರೂ ರಾಡಿ ಭಯವು ಇಲ್ಲ, ಕೋಪವು ಇಲ್ಲ ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ಶಾಲೆಗೆ ಹೋಗದ ತಾಯಿ ಶಾಲೆ ತೆರೆದಳು ಮಹಾತಾಯಿ ದಮನಿತರಿಗೆ ಶೋಷಿತರಿಗೆ ಕೊಟ್ಟಳು ವಿದ್ಯೆ ಸಾರಿ ಜ್ಞಾನವೇ ಶ್ರೇಷ್ಠ ಸಂಪತ್ತು ವಿದ್ಯೆ ಅದರ ಚಿಲಕತ್ತು ನಡೆಯಿರಿ ತಮ್ಮಾ ಶಾಲೆಗೆ ಕಲಿಯಿರಿ ತಮ್ಮಾ ಅಕ್ಷರಮಾಲೆ ದೇಶದ ಮೊದಲು ಶಿಕ್ಷಕಿ ಹೆಣ್ಣು ಮಕ್ಕಳ ರಕ್ಷಕಿ ಸಂಕಟ ಕಾಲದ ಸೇವಕಿ ಸೇವೆ ಮಾಡುತ ಪ್ರಾಣವ ಬಿಟ್ಟ ಕ್ರಾಂತಿ ಜ್ಯೋತಿ ಸಾವಿತ್ರಿ ತಾಯಿ ನಿನಗೆ ಜಯಕಾರ ಜ್ಞಾನದ ಜ್ಯೋತಿ ಬೆಳಗಿದ ತಾಯಿ ನಿನಗೆ ಜಯಕಾರ... ಮಲಿಕಜಾನ ಶೇಖ ಸಂಖ, ಜತ್ತ- ಮಹಾರಾಷ್ಟ್ರ