top of page
ಜೈ ಶಿವ ಶಂಕರ
ಜೈ ಶಿವ ಶಂಕರನ ನೀ ನೆನೆ ಓ ಮನ...,ಹರ ತ್ರಿಪುರಾಂತಕನನ್ನ!!! ವ್ಯೋಮಕೇಶಿ ಗಜ ಚರ್ಮಾಂಬರಧರ ತ್ರಿಶೂಲ ಪಾಣಿ ಮೃತ್ಯುಂಜಯನ ನೀ ನೆನೆ ಓ ಮನ.. ಹರ ತ್ರಿಪುರಾಂತಕನನ್ನ!!! ಕೈಲಾಸವಾಸ ಸಾಂಬ ಸದಾಶಿವ ಗೌರೀಪ್ರಿಯ ಶ್ರೀ ಗಂಗಾಧರನನ್ನ ನೀ ನೆನೆ ಓ ಮನ... ದಕ್ಷಿಣಾ ಮೂರ್ತಿಯನ್ನ ಸದ್ಗುರು ತ್ರಿಪುರಾಂತಕನನ್ನ!!! ಮನ್ಮಥ ರಿಪು ವಿಧು ಭೂಷಣ ಓಂಕಾರ ಪ್ರಿಯ ನಿತ್ಯ ಶುದ್ಧನನ್ನ ನೀ ನೆನೆ ಒ ಮನ.. ವರ ಜಟಾಜೂಟನನ್ನ ಸದ್ಗುರು ತ್ರಿಪುರಾಂತಕನನ್ನ!!! * (ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು🌹💐🙏🙏🙏💐 ಮಹಾಬಲಮೂರ್ತಿ ಕೊಡ್ಲಕೆರೆ
bottom of page