ಜಿ.ಎಸ್. ಆಮೂರ
ಆ ಮೂರು ಎಂದರೆ ಯಾವ ಮೂರು ಸತ್ವ ರಜ ತಮವೊ ಸ್ವರ್ಗ ಮರ್ತ್ಯ ಪಾತಾಳವೊ ವಾತ ಪಿತ್ಥ ಕಫವೊ ಸುರ ನರ ಉರಗವೊ ಬೆಳಗು ಮದ್ಯಾಹ್ನ ಸಂಜೆಯೊ ಬಾಲ್ಯ ಯೌವನ ಮುಪ್ಪೊ ನಿನ್ನೆ ಇಂದು ನಾಳೆಯೊ ನೆಲ ಜಲ ವಾಯುವೊ ಹೀಗೆ ಒಪ್ಪಿಸಿದ ಪಟ್ಟಿಯಲ್ಲಿ ಮೂರು ಹೀಗೆ ಯಾದಿ ಒಪ್ಪಿಸಿದರೆ ನೂರು ಆದೀತು ಇದನ್ನೆಲ್ಲಾ ಮೀರಿದ ಸಹಜತೆಯ ಸಾಕಾರ ಆಮೂರ ಅಧ್ಯಯನ ಅಧ್ಯಾಪನ ಸಂಶೋಧನೆಯ ಹಾದಿ ನಡೆದಷ್ಟು ದಾರಿ ಪಡೆದದ್ದು ಭುವನದ ಭಾಗ್ಯ ಹೆಬ್ಬಂಡೆಯ ಒಡಲಿಗೆ ಚಾಣ ಹಾಕಿ ಕಡೆದದ್ದು ಶಿಲ್ಪ ಅಮೃತಕ್ಕೆ ಹಾರಿದ ಗರುಡ,ನಿಗರ್ವಿ ಸುಸಂಸ್ಕೃತ ಮೆಲ್ಲುಲಿಯ ಮಾತನೊಳು ಓಂಕಾರದ ತನನ ನಡೆ ನುಡಿಯೊಳಿಲ್ಲ ಕಿಂಚಿದೂನ ಹಣ್ಣು ಬಿಟ್ಟ ಮರವೊಂದು ತಲೆ ಬಾಗಿ ನಿಂತ ರೀತಿ ಪಟ್ಟ ಪಾಡೆಲ್ಲವನು ಹುಟ್ಟು ಹಾಡಾಗಿಸಿದವನ ನಾಡಿ ಮಿಡಿತವನರಿತು ವರ ಕವಿಯ ಕಾವ್ಯ ವ್ಯಾಖ್ಯಾನ ಹಳಗನ್ನಡ,ನಡುಗನ್ನಡ ಹೊಸಗನ್ನಡದ ವಿಮರ್ಶನ ದಣಿವರಿಯದ ಓದು ನಿರಂತರ ಬರವಣಿಗೆ ಬಯಸಲಿಲ್ಲ ಯಾವುದೆ ಮೆರವಣಿಗೆ ಪ್ರಶಸ್ತಿ,ಪುರಸ್ಕಾರ,ಮಾನ ಸನ್ಮಾನಗಳು ಸಜ್ಜನ ಜಿ.ಎಸ್.ಆಮೂರರಿಗೆ "ಸುಖೆ ದು:ಖೆ ಸಮೆಕೃತ್ವಾ ಲಾಭಾಲಾಭೌ ಜಯಾಪಜಯೌ ತುಲ್ಯ ನಿಂದಾ ಸ್ತುತಿರ್ಮೌನಿ ಸಂತುಷ್ಟ ಯೇನ ಕೇನ ಚಿತ್" ಗುರುರಾಜ ಶ್ಯಾಮಾಚಾರ್ಯ ಆಮೂರ ಪಂಪ,ನೃಪತುಂಗ,ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ,ಬೇಂದ್ರೆ ಪುರಸ್ಕಾರ ಆ ಆರು ಮೂ ಮೂರು ರ ಸಾವಿರ ಆಮೂರ ಎಂದರೆ ಎಲ್ಲ ಮೂರುಗಳ ಸಂಕಲನ ಅಲ್ಲ ವ್ಯವಕಲನ ಕನ್ನಡದ ಬಾನಂಗಣದ ದಿಂಗಣ ಶತಮಾನದ ವಿಮರ್ಶಕನಿಗೆ ನೂರು ನಮನ. -ಶ್ರೀಪಾದ ಶೆಟ್ಟಿ