top of page

ಗಾಂಧಿ ಪ್ರತಿಮೆ ಮತ್ತು ನಾನು.

ಬೆಳದಿಂಗಳ ರಾತ್ರಿಯಲ್ಲಿ ಮೈದುಂಬಿದ ಚಂದ್ರ ದಟ್ಟವಾಗಿ ಹರಡಿದ ನಕ್ಷತ್ರಗಳು ಧೂಳು ತುಂಬಿದ ಟಾರ್ [ಡಾಂಬರು ] ರಸ್ತೆಯ ಮೇಲೆ ಹಾಲ್ ಚೆಲ್ಲಿದಂತೆ ಬೆಳದಿಂಗಳು ಆ ಕತ್ತಲೆಯ ಮೌನದಲ್ಲಿ ಇದ್ದವರು ನಾವಿಬ್ಬರೇ ಗಾಂಧಿ ಪ್ರತಿಮೆ ಮತ್ತು ನಾನು. ಸರ್ಕಲ್ಲಿನಲ್ಲೀಗ ನಿಶ್ಯಬ್ದ ! ಮಾಯಾನಗರಿಯ ಬೆಳಕಿನಾಟ ಮುಗಿದು ದಿಕ್ಕು ದಿಕ್ಕಿಗೂ ಓಡಾಡಿದ ಗಾಡಿಗಳು ಈಗ ಅದೃಶ್ಯ ...! ಗಾಲಿಗಳ ಉರುಳಾಟದಿಂದ ಇನ್ನೂ ಹವೆಯಾಡುತ್ತಿದ್ದ ರಸ್ತೆ ಮನದೊಳಗೇ ಒಂದು ಪ್ರಶ್ನೆ ಈ ಶಾಂತಿದೂತನ ದಿಕ್ಕು ಬದಲಿಸಿದ್ದು ಯಾವಾಗ...? ಗಾಡಿಗಳನ್ನೇರಿ ಕನಸುಗಳ ಬೆನ್ನಟ್ಟ ಓಡಾಡುವಾಗ ಇದನ್ನಾರೂ ಗಮನಿಸಲಿಲ್ಲವೇ...? ಸರ್ಕಲ್ ನ ಸಿಗ್ನಲ್ ಗೆ ನಿಂತಾಗ ಹಸಿರು ದೀಪಕ್ಕಾಗಿ ದಿಟ್ಟಿಸುತ್ತಾ ಸೋಲುವ ಕಣ್ಣುಗಳು ಇವರತ್ತ ಬೀರಲಿಲ್ಲವೇ...?! ತೇಲಿ ಬರುವ ಗಾಳಿಯು ಕೇಳಿರದ ಕಥೆಗಳನ್ನು ಪಿಸುಗುಟ್ಟುತ್ತಲೇ ಇರುವಾಗ ಶೀತಲವಾಯ್ತು ಕತ್ತಲಷ್ಟೇ ಅಲ್ಲ ಮನಸ್ಸು ಕೂಡಾ..!! - ಪ್ರಭಾಕರ ತಾಮ್ರಗೌರಿ ಗೋಕರ್ಣ

ಗಾಂಧಿ ಪ್ರತಿಮೆ ಮತ್ತು ನಾನು.

©Alochane.com 

bottom of page