ಗಾಂಧಿ ಪ್ರತಿಮೆಯೊಳಗೆ
ಗಾಂಧಿ ಮಾರಾಟವಾಗುತ್ತಿದ್ದಾರೆ ಸತ್ಯ ಅಹಿಂಸೆಯ ತತ್ವದಂತೆ ಚಿತ್ರ, ಕೆತ್ತನೆ, ಮೂರ್ತಿಗಳ ರೂಪದಲ್ಲಿ ಗಾಂಧಿ ಪ್ರದರ್ಶನದ ಗೊಂಬೆಯಾಗಿದ್ದಾರೆ ಗಾಂಧಿ ಬೇಕಿರುವುದು ವಾಸ್ತವಕ್ಕಲ್ಲ ಆಚರಣೆಯ ವೈಭೋಗಕ್ಕೆ ನೋಟುಗಳ ಮೇಲಿನ ಗಾಂಧಿ ಖಜಾನೆಗಳಲ್ಲಿ ಕಂಬಿ ಎಣಿಸುತ್ತಿದ್ದಾರೆ ನಾಲ್ಕು ಗೋಡೆಗಳ ಮಧ್ಯದ ಗಾಂಧಿಯ ಬಯಲಿಗೆಳೆದು ತಂದಿದ್ದಾರೆ ಪುಸ್ತಕದಲಿ ಗಾಂಧಿಯ ಓದಿಕೊಂಡವರೆಲ್ಲ ಗಾಂಧಿಯ ಪ್ರತಿಮೆಯೆದುರು ಪೋಟೋ ಕ್ಲಿಕ್ಕಿಸಿಕ್ಕೊಳ್ಳುತ್ತಿದ್ದಾರೆ ಗಾಂಧೀಯ ಪ್ರತಿಮೆಗೆ ನೀರೆರೆಚಿ ತಂಪಾಗಿಸಿ, ಶುಚಿಗೊಳಿಸಿಯೇ ಇಲ್ಲೊಂದು ಜೀವ ಬದುಕ ಕಟ್ಟಿಕೊಂಡಿದೆ ತಿನ್ನುವ ಅನ್ನದಲ್ಲಿ ಆಕೆ ಗಾಂಧಿಯ ನೆನೆದಿಲ್ಲ, ಪ್ರತಿಮೆಯ ನೆನೆದಿದ್ದಾಳೆ ಪ್ರತಿಮೆಗಳ ಸುತ್ತ ನಿಂತವರು ಆಡುವ ಮಾತುಗಳ ಕೇಳಿಕೊಂಡ ಗಾಂಧೀ ಮತ್ತೆ ಬದುಕುವಾಸೆ ಮರೆತಿದ್ದಾರೆ ಪ್ರತಿಮೆಯಾಗಿಯೂ ಗಾಂಧೀ ತನ್ನನ್ನು ಒಪ್ಪಿಕ್ಕೊಳ್ಳುತ್ತಿಲ್ಲ ರಾಮರಾಜ್ಯದ ಕನಸನ್ನು ಹಾಗೇ ಮರೆತು ನಕ್ಕಿದ್ದಾರೆ ನಿರ್ಜನ ಪ್ರದೇಶದಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವ ವಿಚಾರವಿದೆ ಪ್ರತಿಮೆಗಳ ನಿಷೇದಕ್ಕಾಗಿ ಮತ್ತೆ ಮರವಾಗಿ ಹುಟ್ಟುವ ಜೀವಂತ ಆಸೆಯ ಹೊತ್ತು..... @ ಮೋಹನ್ ಗೌಡ ಹೆಗ್ರೆ