top of page

ಗಸ್ತು

ಮಗುಮ್ಮಾಗಿ ಪಕ್ಷಿನೋಟದ ಅಕ್ಷಿ ದ್ವಯಗಳ ಬೇಕಾಬಿಟ್ಟಿ ಹೊರಳಿಸುವುದಸ್ಟೇ ಈ ಗಸ್ತಿನ ದಿನಚರಿಯಲ್ಲ ವೀರಭಟರ ಎದೆಗಾರಿಕೆ ರಾಜಠೀವಿಯ ಗತ್ತಿನ ನಡಿಗೆ ಪೇಟೆಯ ಸಂದಣಿಗಳಲ್ಲಿ ಜಂಗುಳಿಯ ರೌದ್ರತೆಯ ಚಣಗಳಲ್ಲಿ ಸಾಗಿದೆ ದಸ್ತು ನಿರ್ಭೀಡೆಯಲಿ ಗೊತ್ತು ಗುರಿಯಿರದ ನಡೆಗಳಿಗೆ ಕೊಟ್ಟು ಸೊಂಟದ ಪೆಟ್ಟು ಗಸ್ತೆಂದರೆ ಬರೀ ತಿರುಗಾಟದ ಹುಕಿಯಲ್ಲ ಶಬ್ದ ನಶ್ಶಬ್ದಗಳ ಸೀಳುವ ಹುಬೆಯಲ್ಲ ಗಲಾಟೆ ಗಂಡಾಂತರ ಗೋಳಾಟಗಳ ಪಲ್ಲಟಗೊಳಿಸುವ ಸಂಚಾರಿ ನಡೆಯಲ್ಲ ಗಸ್ತೆಂದರೆ ಬರೀ ಗತ್ತಲ್ಲ ಎಲ್ಲಾ ಹಕೀಕತ್ತುಗಳ ಬೆಂಕಿ ಭಸ್ಮ ದೊಂಬಿ ದಾಂಧಲೆ ಕೊಲೆ ಸುಲಿಗೆಗಳ ಸದ್ದಡಗಿಸುವ ಚೇತೋಹಾರಿ ನಡಿಗೆಯಲ್ಲ ಗಸ್ತಿನ ಗೈರತ್ತೇ ಬೇರೆ ಬೇರೆ ಒಂದೇ ಘರ್ಜನೆಯ ಬೆಚ್ಚಿಗೆ ಒಂದೇ ಸೀಟಿಯ ಸದ್ದಿಗೆ ಮಂಡಲದೊಳಗೆ ಧರಣಿ ನಿಂತ ಪೋಷಾಕು ಪುರುಷರ ಮೀಸೆ ಅಂಚಿನಲಿ ಬೆವರಸಾಲ ಹೊಳೆ ಆತಂಕದ ದಿನಚರಿಗಳ ನಡುವೆ ಇದ್ದರಷ್ಟೆ ಗಸ್ತು ಬಸವನಹುಳುಗಳಿಗೆ ಚಿಪ್ಪೊಳಗೆ ಅಡಗಿದ ಆಮೆಗಳಿಗೆ ರಸ್ತೆಗಿಳಿಯುವ ಧೈರ್ಯ ಗಸ್ತಿನ ಚಿಂತೆ ಇದ್ದುದು ಹಸು ಕುರಿಗಳಿಗಲ್ಲ ಬಿಲದಲ್ಲಡಗಿದ ಹುಲಿ ಸಿಂಹಗಳಿಗಷ್ಟೆ ಮಂಜುನಾಥ ನಾಯ್ಕ ಯಲ್ವಡಿಕವೂರ

ಗಸ್ತು
bottom of page