top of page
ಗಡಿಯಾರ
ಬೆಳಗಾಯಿತು ಹೇಳಲು ಸೂರ್ಯನು ಬರುವನು ಬಾನಿನಲ್ಲಿ! ದಿನಚರಿಯ ನೆನಪಿಸಲು,ಗಡಿಯಾರ ಇರುವುದು ಪ್ರತಿ ಮನೆಯಲ್ಲಿ!! ಸಮಯವ ನೋಡಲು ನೀನಿರಬೇಕು! ನೆಪ ಹೇಳಲು ಕೂಡಾ ನೀನೇ ಬೇಕು!! ನಿನ್ನನು ನೋಡುತ ಗಡಬಡಿಸುವ ಹಲವರು!! ಆಗಲಿ ಬಿಡು ಎನುತಾ ನಿರಾಳವಾಗಿರುವರು ಕೆಲವರು!! ಬೆಲೆ ಇರಲಿ ದುಬಾರಿ, ಅಗ್ಗವೇ ಇರಲಿ.... ವಿಧ - ವಿವಿಧ ವಿನ್ಯಾಸಗಳಿರಲಿ.. ತಾರತಮ್ಯ... ಬೇಧವು ಇಲ್ಲದೆ ತೋರಿಸುವ ಸಮಯ ಒಂದೇ!! ಕೆಲಸವೇ ಇರಲಿ - ವಿರಾಮವಾಗಲಿ ನೀನಿಲ್ಲದೆ ದಿನ ಸಾಗದು ಮುಂದೆ!! ಸಾವಿತ್ರಿ ಶಾಸ್ತ್ರಿ
bottom of page